Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ತಪ್ಪಿದ ಭಾರೀ ವಿಮಾನ ಅವಘಡ…!

Spread the love

ಹುಬ್ಬಳ್ಳಿ: ಕಣ್ಣೂರಿನಿಂದ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೋಗಬೇಕಾದ ಇಂಡಿಗೋ ವಿಮಾನ ತಪ್ಪು ಲ್ಯಾಂಡಿಂಗ್ ಮಾಡಲು ಹೋಗಿ, ನೋಸ್ ಟೈರ್ ಆಪ್ ಶೂಟ್ ಆಗಿದ್ದು, ಪೈಲಟ್ ನ ಚಾಣಾಕ್ಷತನದಿಂದ ವಿಮಾನದಲ್ಲಿದ್ದ 5 ಪ್ರಯಾಣಿಕರು ದೊಡ್ಡದೊಂದು ದುರಂತದಿಂದ ಪಾರಾದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಕಣ್ಣೂರುನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನವೂ ಹುಬ್ಬಳ್ಳಿಯಿಂದ 18 ಪ್ಯಾಸೆಂಜರ್ ಗಳನ್ನ ಕರೆದುಕೊಂಡು ಪ್ರಯಾಣ ಬೆಳೆಸಬೇಕಿತ್ತು. ಆದರೆ, ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ವೇಳೆಯಲ್ಲಿ ಸುಮಾರು 200 ಮೀಟರ್ ಮುಂದೆ ಬಂದು ಲ್ಯಾಂಡ್ ಆಗಿದೆ, ಈ ಸಮಯದಲ್ಲಿ ನೋಸ್ ಟೈರ್ ಶೂಟ್ ಆಪ್ ಆಗಿದೆ.

ಘಟನೆಯಿಂದ ಗಾಬರಿಯಾಗದಂತೆ ಲ್ಯಾಂಡಿಂಗ್ ಆಗುತ್ತಿದ್ದ ವಿಮಾನವನ್ನ ಮತ್ತೆ ಟೇಕ್ ಆಪ್ ಮಾಡಿದ, ಪೈಲಟ್, ಸಾವಕಾಶವಾಗಿ ವಿಮಾನವನ್ನ ಮತ್ತೆ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ನೋಸ್ ಟೈರ್ ಸ್ಪೋಟಗೊಂಡಿದ್ದರಿಂದ ಮುಂದಿನ ಪ್ರಯಾಣವನ್ನ ರದ್ದುಗೊಳಿಸಲಾಗಿದೆ.

ಇದರಿಂದ ಹುಬ್ಬಳ್ಳಿಯಿಂದ ಹೋಗುತ್ತಿದ್ದ 18 ಪ್ರಯಾಣಿಕರು ತಮ್ಮ ಪ್ರಯಾಣವನ್ನ ರದ್ದುಗೊಳಿಸಿ, ಮರಳಿ ಹೋದ ಘಟನೆಯೂ ನಡೆದಿದ್ದು, ಘಟನೆಗೆ ಸಂಬಂದಿಸಿದಂತೆ ಡಿಸಿಜಿ ತಂಡವೂ ತನಿಖೆ ಮಾಡುವ ಸಾಧ್ಯತೆಯಿದೆ.


Spread the love

Leave a Reply

Your email address will not be published. Required fields are marked *