ಭಾರತಕ್ಕೆ ಬರಬೇಡಿ: ಡಿಜಿಸಿಎ ನಿರ್ಬಂಧ: ಚೀನಿಯರಿಗೆ ಎಚ್ಚರಿಕೆ

ನವದೆಹಲಿ: ಕೋರೊನಾ ವೈರಾಣು ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಜನೇವರಿ 15ರ ನಂತರ ಚೀನಾಗೆ ಹೋಗಿದ್ದ ಯಾವುದೇ ವಿದೇಶಿಗರಿಗೆ ಭಾರತಕ್ಕೆ ಬರಲು ಅನುಮತಿ ಇಲ್ಲವೆಂದು ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ ಡಿಜಿಸಿಎ ಹೇಳಿದೆ.
ಡಿಜಿಸಿಎ ಹೊರಡಿಸಿರುವ ಸುತ್ತೋಲೆಯಲ್ಲಿ ಫೆಬ್ರುವರಿ 5ಕ್ಕೆ ಮೊದಲು ಚೀನಾಗೆ ನೀಡಿರುವ ಎಲ್ಲ ವೀಸಾಗಳನ್ನ ರದ್ದುಪಡಿಸುವುದಾಗಿ ತಿಳಿಸಿದೆ. ಆದ್ರೆ, ವಾಯುಯಾನ ಸಿಬ್ಬಂದಿ ಚೀನಾ ನಾಗರಿಕರಾದರೂ ಈ ನಿರ್ಬಂಧದಿಂದ ಹೊರತಾಗಿರುತ್ತಾರೆ ಎಂದು ಹೇಳಿದೆ.
ಭಾರತದ ಇಂಡಿಗೋ ಮತ್ತು ಏರ್ ಇಂಡಿಯಾ ಚೀನಾಗೆ ಎಲ್ಲ ವಿಮಾನಗಳನ್ನ ರದ್ದು ಮಾಡಿದೆ. ಆದರೆ, ಸ್ಪೈಸ್ ಜೆಟ್ ಹಾಂಕಾಂಗ್-ದೆಹಲಿ ಮಾರ್ಗದಲ್ಲಿ ಸಂಚಾರ ಮುಂದುವರಿಸಿದೆ.