ಭಾರತದಲ್ಲಿ ಕೊರೋನಾಗೆ ಮೊದಲ ಬಲಿ: ಮಲೇಷ್ಯಾದಿಂದ ಬಂದಿದ್ದ ವ್ಯಕ್ತಿ

ಕೊಚ್ಚಿ: ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಕೇರಳದ ಎರ್ನಾಕುಲಂ ವೈದ್ಯಕೀಯ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಕಣ್ಣೂರು ಜಿಲ್ಲೆಯ ಪಯ್ಯನ್ನೂರ್ ಮೂಲದ ವ್ಯಕ್ತಿ ಮಲೇಷ್ಯಾದಿಂದ ಕೇರಳಕ್ಕೆ ಆಗಮಿಸಿದ್ದರು. ಗುರುವಾರ ರಾತ್ರಿ ಜ್ವರ ಮತ್ತು ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ರಕ್ತದ ಮಾದರಿಯಲ್ಲಿ ಕೊರೋನಾ ವೈರಸ್ ಎಂದು ನೆಗೆಟಿವ್ ಎಂದು ವರದಿ ಬಂದಿತ್ತು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.