ಹುಬ್ಬಳ್ಳಿ: ‘INCOME TAX’ ವಾಹನಕ್ಕೆ ಲಾರಿ ಡಿಕ್ಕಿ- ಚಾಲಕ ಸಾವು, ಸಹಾಯಕ ಆಯುಕ್ತ, ಇನ್ಸಪೆಕ್ಟರ್ ಕೂದಲೆಳೆ ಅಂತರದಲ್ಲಿ ಪಾರು….

ಹುಬ್ಬಳ್ಳಿ: ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಜಾಗೃತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿಯೇ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಚಾಲಕ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ.
ಇಲಾಖೆಯ ವಾಹನದಲ್ಲಿದ್ದ ಸಹಾಯಕ ಆಯುಕ್ತ ಶ್ರೀಶೈಲ ದೊಡ್ಡಮನಿ ಹಾಗೂ ಇಲಾಖೆಯ ಇನ್ಸಪೆಕ್ಟರ್ ಈಶ್ವರ ಸುಧೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ಸಾರೆ.
ಪ್ರತಿನಿತ್ಯದಂತೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಲಾರಿಯೊಂದರ ಪತ್ರಗಳನ್ನ ನೋಡಲು ವಾಹನ ನಿಲ್ಲಿಸಲಾಗಿತ್ತು. ಮುಂದೆ ನಿಂತಿದ್ದ ಲಾರಿ ಚಾಲಕನ ಬಳಿ ಪತ್ರಗಳನ್ನ ಪಡೆಯಲು ಇಲಾಖೆಯ ಚಾಲಕ ರಫೀಕ ನದಾಫ ಕೆಳಗಿಳಿದು ನಿಂತಿದ್ದಾರೆ. ಅದೇ ಸಮಯದಲ್ಲಿ ಲಾರಿಯೊಂದು ಬಂದು ಇವರಿಗೆ ಡಿಕ್ಕಿ ಹೊಡೆದು ಮುಂದಿನ ಲಾರಿಗೂ ಗುದ್ದಿದೆ.
ಹುಬ್ಬಳ್ಳಿ ಹೊರವಲಯದ ರಿಂಗ್ ರೋಡ್‌ಗೆ ಅಂಟಿಕೊಂಡಿರುವ ಮಂಟೂರ ಕ್ರಾಸ್ ಬಳಿ ಘಟನೆ ನಡೆದಿದ್ದು, ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.