ಬೆಳಗಾವಿ ರೇಂಜ್ ಐಜಿ ರಾಘವೇಂದ್ರ ಸುಹಾಸ ವರ್ಗಾವಣೆ…!

ಬೆಂಗಳೂರು: ರಾಜ್ಯ ಸರಕಾರ ಐವರು ಐಜಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಬೆಳಗಾವಿ ವಿಭಾಗದ ಐಜಿಪಿಯವರಾದ ರಾಘವೇಂದ್ರ ಸುಹಾಸ ಅವರನ್ನೂ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.

ಕಲಬುರಗಿಯ ಪೊಲೀಸ್ ಕಮೀಷನರ್ ಆಗಿದ್ದ ಎನ್.ಸತೀಶಕುಮಾರ ಅವರನ್ನ ಬೆಳಗಾವಿ ವಿಭಾಗದ ಐಜಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ರಾಘವೇಂದ್ರ ಸುಹಾಸ ಅವರನ್ನ ಇಂಟರನಲ್ ಸೆಕ್ಯುರಿಟಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಇನ್ನುಳಿದಂತೆ ಬಳ್ಳಾರಿ ವಿಭಾಗದ ಐಜಿ ನಂಜುಂಡಸ್ವಾಮಿ ಅವರನ್ನ ಪ್ರಿಸರ್ನ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಮನೀಷ ಕರ್ಬೇಕರ ಅವರನ್ನ ಬಳ್ಳಾರಿ ವಿಭಾಗಕ್ಕೆ ಐಜಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.