ಪೊಲೀಸ್ ಕಾನ್ಸಟೇಬಲ್ ಗಳೇ ನಿಜವಾದ ಹೀರೊಗಳು: ಆ ಸಭೆಯಲ್ಲಿ ಐಜಿಪಿ ರಾಘವೇಂದ್ರ ಸುಹಾಸ ಏನಂದ್ರು ಗೊತ್ತಾ..!

ಹುಬ್ಬಳ್ಳಿ: ಉತ್ತರ ವಲಯ ಐಜಿಪಿಯಾಗಿರುವ ರಾಘವೇಂದ್ರ ಸುಹಾಸ ಅವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ ಹುದ್ದೆಯನ್ನ ಪ್ರಭಾರಿಯಾಗಿ ನಿರ್ವಹಣೆ ಮಾಡುತ್ತಿರುವುದು ಬಹುತೇಕರಿಗೆ ಗೊತ್ತೆಯಿದೆ. ಆದರೆ, ಬಹುತೇಕರಿಗೆ ಗೊತ್ತೆಯಿಲ್ಲದ ಮಾಹಿತಿಯನ್ನ ನಿಮಗೆ ತಿಳಿಯುವ ಕೌತುಕವಿದ್ದರೇ ಪೂರ್ಣವಾಗಿ ಇದನ್ನ ನೋಡಿ.
ಹುಬ್ಬಳ್ಳಿ-ಧಾರವಾಡದಲ್ಲಿ ಹಲವು ಅಂದರ್-ಬಾಹರ್ ಪ್ರಕರಣಗಳನ್ನ ಭೇದಿಸಿರುವ ಐಜಿಪಿ ರಾಘವೇಂದ್ರ ಸುಹಾಸ ಅವರು, ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯೊಂದನ್ನ ನಡೆಸಿದ್ದರು. ಆ ಸಭೆಯಲ್ಲಿ ಎಲ್ಲರೂ ನಿಬ್ಬೆರಾಗುವಂತೆ ಮಾತನಾಡಿದ್ರು.
ಹುಬ್ಬಳ್ಳಿ-ಧಾರವಾಡದಲ್ಲಿ ರೌಡಿಗಳಿಗೆ ಪೊಲೀಸರು ಅಣ್ಣಾ ಅನ್ನುವ ಹಾಗಾಗಿದೆ. ಅದರ ಬದಲಾಗಿ ಪೊಲೀಸರಿಗೆ ರೌಡಿಗಳು ಅಣ್ಣಾ ಅನ್ನಬೇಕು. ನಮ್ಮಲ್ಲಿ ನಿಜವಾಗಿಯೂ ಕಾರ್ಯನಿರ್ವಹಿಸೋರು ಉತ್ತಮ ಪೊಲೀಸ್ ಕಾನ್ಸಟೇಬಲಗಳು, ಅವರನ್ನ ಸರಿಯಾಗಿ ನೋಡಿಕೊಳ್ಳಿ ಎಂದಿದ್ದಾರಂತೆ.
ತಾವೆಲ್ಲರೂ ಫೀಲ್ಟರ್ ನೀರನ್ನ ಕುಡಿಯುತ್ತಿದ್ದರೇ ಪೊಲೀಸ್ ಕಾನ್ಸಟೇಬಲಗಳಿಗೆ ಬೇರೆ ನೀರು ಕೊಡುವುದು ಬೇಡಾ. ಅವರಿಗೂ ಅದೇ ನೀರನ್ನ ಕೊಡಿ. ಅವರಿಂದಲೇ ಪ್ರಮುಖವಾಗಿ ಕೆಲಸ ನಡೆಯುವುದು ಎಂದು ಹೇಳಿದ್ದಾರಂತೆ. ಅಷ್ಟೇ ಅಲ್ಲ, ಪೊಲೀಸ್ ಕಾನ್ಸಟೇಬಲಗಳಿಗೆ ಖರ್ಚಾದ ಬಿಲ್ ನ್ನ ತಮಗೆ ನೀಡಿ, ನಾನೇ ಕೊಡುತ್ತೇನೆ ಎಂದರಂತೆ.
ಐಜಿಪಿ ರಾಘವೇಂದ್ರ ಸುಹಾಸ ಅವರ ಮಾತುಗಳು ಸತ್ಯವಾಗಿದ್ದು, ಬಹುತೇಕ ಕ್ರೈಂಗಳನ್ನ ತಡೆಗಟ್ಟುವಲ್ಲಿ ಪೊಲೀಸ್ ಕಾನ್ಸಟೇಬಲಗಳ ಕೈಚಳಕವೇ ಹೆಚ್ಚಾಗಿರತ್ತೆ. ಆದರೆ, ಕೆಲವು ಕಾನ್ಸಟೇಬಲ್ ಗಳ ‘ಕೈ’ ಕೂಡಾ ಇರುವುದನ್ನ ಗಮನಿಸುವುದು ಸೂಕ್ತ.