ಇಬ್ರಾಹಿಂ ರೋಜಾ ಸಂರಕ್ಷಣಾ ಗೋಡೆ ಕುಸಿತ- ಹಳ್ಳದಲ್ಲಿ ಕೊಚ್ಚಿಹೋದ ವ್ಯಕ್ತಿ
1 min readವಿಜಯಪುರ: ಹಳ್ಳವೊಂದು ದಾಟಲು ಹೋಗಿ ವ್ಯಕ್ತಿಯೋರ್ವ ಕೊಚ್ಚಿಕೊಂಡು ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ನಡೆದಿದೆ.
ಶಿವಪುತ್ರ ನಾಟೀಕರ (40) ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿ. ಸ್ಥಳಕ್ಕೆ ದೇವರಹಿಪ್ಪರಗಿ ತಹಶೀಲ್ದಾರ ಭೇಟಿ ನೀಡಿದ್ದು, ಕೊಚ್ಚಿಹೋಗಿರುವ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಹಳ್ಳದಲ್ಲಿ ವ್ಯಕ್ತಿ ಕೊಚ್ಚಿ ಹೋದ್ರೂ ಈಗಲು ಹಳ್ಳ ದಾಟಲು ಗ್ರಾಮದ ಜನತೆ ಯತ್ನಿಸುತ್ತಿದ್ದಾರೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೀರಿನಲ್ಲಿ ಗ್ರಾಮದ ಜನತೆ ಹಳ್ಳ ದಾಟಲು ಸಾಹನ ಮಾಡಿತ್ತಿದ್ದಾರೆ. ಹರಿಯುವ ನೀರಿನಲ್ಲಿ ಹಳ್ಳ ದಾಟುವ ಯತ್ನ ಕೈ ಬಿಡುವಂತೆ ಗ್ರಾಮಸ್ಥರಿಗೆ ತಹಶೀಲ್ದಾರ ಮನವಿ ಮಾಡಿದ್ದಾರೆ.
ಐತಿಹಾಸಿಕ ಇಬ್ರಾಹಿಂ ರೋಜಾ ಸಂರಕ್ಷಣಾ ಗೋಡೆ ಮಳೆಗೆ ಕುಸಿತ
ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಐತಿಹಾಸಿಕ ಗೋಡೆಯೊಂದು ಕುಸಿದು ಬಿದ್ದಿದೆ.
ವಿಜಯಪುರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ವಿಜಯಪುರ ನಗರದಲ್ಲಿರುವ ಐತಿಹಾಸಿಕ ಸ್ಮಾರಕ ಇಬ್ರಾಹಿಂ ರೋಜಾ ಸಂರಕ್ಷಣಾ ಗೋಡೆ ಕುಸಿದೆ. ಇನ್ನು ಗೋಡೆಯ ಪಕ್ಕದಲ್ಲಿ ನಿಲ್ಲಿಸಿದ ಟಾಟಾ ಎಸಿ ವಾಹನದ ಮೇಲೆ ಗೋಡೆ ಕುಸಿದು ಬಿದ್ದು ವಾಹಮ ಜಖಂ ಆಗಿದೆ. ಆದ್ರೇ, ಯಾವುದೆ ಪ್ರಾಣ ಹಾನಿಯಾಗಿಲ್ಲ. ಗೋಡೆ ಕುಸಿತದಿಂದ ವಿದ್ಯುತ್ ಕಂಬಗಳು ನೆಲಕಚ್ಚಿದಕ್ಕೆ ಸ್ಥಳೀಯರು ಆತಂಕಗೊಂಡಿದ್ದಾರೆ.