ನಿವೃತ್ತಿಯಂಚಿನಲ್ಲಿದ್ದ ಐಎಎಸ್ ಅಧಿಕಾರಿ ಆತ್ಮಹತ್ಯೆ: ಏನಾಗಿದೆ ಇವರಿಗೆ
ಬೆಂಗಳೂರು: ಐಎಂಎ ಹಗರಣದ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಅಮಾನತುಗೊಂಡು, ಎಸ್ಐಟಿಯಿಂದ ಬಂಧನಕ್ಕೊಳಗಾಗಿದ್ದರು. ಜಯನಗರ ನಿವಾಸದಲ್ಲಿ ವಿಜಯ್ ಶಂಕರ್ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೆಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ ವಿಜಯ್ ಶಂಕರ್ ಹೆಸರು ಐಎಂಎ ಹಗರಣದಲ್ಲಿ ಕೇಳಿ ಬಂದಿತ್ತು. ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹೇಳಿಕೆ ಆಧಾರದ ಮೇಲೆ 2019 ಜುಲೈ 8ರಂದು ಲಂಚ ಪಡೆದ ಆರೋಪದಲ್ಲಿ ವಿಜಯ್ ಶಂಕರ್ ಅವರನ್ನ ಎಸ್‍ಐಟಿ ಬಂಧಿಸಿತ್ತು. ಜಾಮೀನು ಪಡೆದು ವಿಜಯ್ ಶಂಕರ್ ಹೊರಬಂದಿದ್ದರು. ಐ.ಎಂ.ಎ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದ ಐ.ಎ.ಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದು, ತನಿಖೆ ಮುಂದುವರೆದಿದೆ.