ಅಂದು ಮೇಟಿ ಹೇಳಿದ್ದನ್ನೇ ಇಂದು ಜಾರಕಿಹೊಳಿ ಹೇಳ್ತಿದ್ದಾರೆ: ಅಂದು ಕಾಂಗ್ರೆಸ್ ರಾಜೀನಾಮೆ ಪಡೆದಿತ್ತು.. ಇಂದು ಬಿಜೆಪಿ…!?
1 min readಬೆಂಗಳೂರು: 71 ವರ್ಷದ ಎಚ್.ವೈ.ಮೇಟಿ ಅವರದ್ದೆನ್ನಲಾದ ಸಿಡಿಯೊಂದು 2016ರ ಡಿಸೆಂಬರ್ ನಲ್ಲಿ ಸದ್ದು ಮಾಡಿತ್ತು. ಅದರ ಸತ್ಯಾಸತ್ಯತೆ ತಿಳಿಯುವ ಮುನ್ನವೇ ಭಾರತೀಯ ಜನತಾ ಪಕ್ಷ ದೊಡ್ಡದೊಂದು ಹೋರಾಟಕ್ಕೆ ಅಣಿಯಾಗಿತ್ತು. ಹಾಗಾಗಿಯೇ, ಕಾಂಗ್ರೆಸ್ ಅಂದು ಎಚ್.ವೈ.ಮೇಟಿ ಸಚಿವ ಸ್ಥಾನದಿಂದ ನಿರ್ಗಮಿಸಬೇಕಾಗಿತ್ತು. ಆದರಿವತ್ತು, ಪಾತ್ರಗಳು ಅದಲು ಬದಲಾಗಿವೆ. ಒಂದೇ ವ್ಯತ್ಯಾಸವೆಂದರೇ, ಅಂದು ಕಾಂಗ್ರೆಸ್ ನಲ್ಲಿದ್ದವರು, ಇಂದು ಬಿಜೆಪಿಯಲ್ಲಿ ಮಂತ್ರಿಯಾಗಿ ಸಿಡಿ ಪ್ರಕರಣದಲ್ಲಿ ಹೆಸರು ಬಂದಾಗಿದೆ.
ಸದಾ ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಭಾರತೀಯ ಜನತಾ ಪಕ್ಷ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣದಿಂದ ಕಂಗಾಲಾಗಿದೆ. ಆದರೆ, ಅಂದು ಎಚ್.ವೈ.ಮೇಟಿ ಹೇಳಿದ ರೀತಿಯಲ್ಲಿಯೇ ಆ ಮಹಿಳೆ ಯಾರೆಂದು ಗೊತ್ತಿಲ್ಲವೆಂದೂ, ಇದು ಫೇಕ್ ಸಿಡಿಯಂದೂ ಮತ್ತೂ ರಾಜಕೀಯ ಷಢ್ಯಂತ್ರವೆಂದೂ ರಮೇಶ ಜಾರಕಿಹೊಳಿ ಹೇಳಿಕೊಂಡಿದ್ದಾರೆ.
ಅಂದು ಮೇಟಿ ಹೇಳಿದಾಗ ಅವರ ರಾಜೀನಾಮೆ ಪಡೆಯುವವರೆಗೂ ಹೋರಾಟ ನಡೆಸಿದ್ದ ಬಿಜೆಪಿ, ಅಂದು ಇನ್ನೂ ಒಂದು ಮಾತು ಹೇಳಿದ್ದನ್ನ ಇಲ್ಲಿ ಸ್ಮರಿಸಬೇಕಾಗತ್ತೆ. ಸಿಡಿಯ ಬಗ್ಗೆ ತನಿಖೆಯಾಗಿ, ಅದು ಸುಳ್ಳು ಎಂದಾದರೇ, ಅವರು ಮತ್ತೆ ಮಂತ್ರಿಯಾಗಲಿ ಎಂದು ಹೇಳಿತ್ತು. ಈಗ ರಮೇಶ ಜಾರಕಿಹೊಳಿಯವರ ವಿಷಯದಲ್ಲಿ ಇಂತಹದೇ ನಿರ್ಣಯವನ್ನ ಶಿಸ್ತಿನ ಪಕ್ಷ ರಮೇಶ ಜಾರಕಿಹೊಳಿಯವರ ರಾಜೀನಾಮೆ ಪಡೆಯುವ ಮೂಲಕ ತೆಗೆದುಕೊಳ್ಳುತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ವೀಡಿಯೋಗಳನ್ನ ನಕಲಿ ಮಾಡುವುದೆನ್ನುವುದು, ತದನಂತರ ಅದು ಫೇಕ್ ಎಂದು ಸಾಭೀತಾಯಿತೆಂದು ಮತ್ತೆ ಜನರ ಮುಂದೆ ಬರುವುದು, ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿಬಿಟ್ಟಿದೆ. ಇಲ್ಲಿ ಆತ್ಮಸಾಕ್ಷಿಗಳಷ್ಟೇ ಕೆಲಸ ಮಾಡಬೇಕಿದೆ ಹೊರತೂ, ರಾಜಕೀಯ ಷಢ್ಯಂತ್ರಗಳಲ್ಲ ಎಂಬುದು ಪ್ರಜ್ಞಾವಂತರ ಮಾತಾಗಿದೆ.