Posts Slider

Karnataka Voice

Latest Kannada News

ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಇನ್ನಿಲ್ಲ… ರಾಸಲೀಲೆ ಪ್ರಕರಣದಲ್ಲಿ “ಈ ಮೊದಲು” ಮಂತ್ರಿಗಿರಿ ಕಳೆದುಕೊಂಡಿದ್ದರು…

Spread the love

ಬಾಗಲಕೋಟೆ: ಬಾಗಲಕೋಟೆ ಶಾಸಕ ಹೆಚ್ ವೈ ಮೇಟಿ ಅವರು ತಮ್ಮ 80ನೇ ವಯಸ್ಸಿನಲ್ಲಿ ಬೆಂಗಳೂರು ಅಪೋಲೋ ಆಸ್ಪತ್ರೆಯಲ್ಲಿ ಶ್ವಾಸಕೋಶ ತೊಂದರೆಯಿಂದ ನಿಧನರಾಗಿದ್ದಾರೆ.

ಕಳೆದ ವಾರದಿಂದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಬೆಳಿಗ್ಗೆ 11.45 ಕ್ಕೆ ಚಿಕಿತ್ಸೆ ಫಲಿಸದೆ ಸಾವಾಗಿದ್ದು, ರಾತ್ರಿ ಎಂಟಕ್ಕೆ ಮೃತದೇಹ ಬಾಗಲಕೋಟೆ ಆಗಮನವಾಗಲಿದೆ.
ರಾತ್ರಿ ಜಿಲ್ಲಾ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರ ದರ್ಶನಕ್ಕೀಡಲು ತೀರ್ಮಾನಿಸಲಾಗಿದೆ. ನಾಳೆ ಬೆಳಿಗ್ಗೆ ತಿಮ್ಮಾಪುರ ಗ್ರಾಮಕ್ಕೆ ರವಾನೆಯಾಗಲಿದ್ದು, ಮೇಟಿಯವರ ಹೊಲದಲ್ಲಿ ಲಿಂಗಾಯತ ಧಾರ್ಮಿಕ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ.

ಹುಲ್ಲಪ್ಪ ಯಮನಪ್ಪ ಮೇಟಿ ವಿವರ…

ಬಾಗಲಕೋಟೆ ಕಾಂಗ್ರೆಸ್ ಹಾಲಿ ಶಾಸಕ, ಮಾಜಿ ಸಚಿವ.
ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ
9-10-1946 ರಲ್ಲಿ ಜನನ
ಪತ್ನಿ :-ಲಕ್ಷ್ಮೀ ಬಾಯಿ ಮೇಟಿ.
ಮಕ್ಕಳು :- ಮಲ್ಲಿಕಾರ್ಜುನ , ಉಮೇಶ, ಬಾಯಕ್ಕ,ಮಾದೇವಿ.
ಮೇಟಿ ವಿದ್ಯಾರ್ಹತೆ:ಏಳನೇ ತರಗತಿ ಅರ್ಧಕ್ಕೆ.
ರಾಜಕೀಯ ಜೀವನ ಆರಂಭ ಬಿಲ್ ಕೆರೂರು ಮಂಡಳ ಪಂಚಾಯಿತಿ ಸದಸ್ಯ ಹಾಗೂ ಅಧ್ಯಕ್ಷನಾಗಿ.
ನಂತರ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ನಿರ್ದೇಶಕ ನಂತರ ಅಧ್ಯಕ್ಷ.
ಅಲ್ಲಿಂದ ಮುಖ್ಯ ರಾಜಕಾರಣ ಶುರು.
ಜಿವಿ ಮಂಟೂರು ಬಾಗಲಕೋಟೆ ಮಾಜಿ ಶಾಸಕ(ದಿವಂಗತ)ಮೇಟಿ ರಾಜಕೀಯ ಗುರುಗಳು.
೧೯೮೯ರಲ್ಲಿ
ಗುಳೇದಗುಡ್ಡ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು (ಜೆಡಿಎಸ್)
೧೯೯೪ರಲ್ಲಿ ಮತ್ತೊಮ್ಮೆ ಗುಳೇದಗುಡ್ಡದಿಂದ ಗೆಲುವು (ಜೆಡಿಎಸ್)
ಮೊದಲ ಬಾರಿಗೆ ಸಚಿವ.
೧೯೯೪ ದೇವೆಗೌಡ ಸಂಪುಟ. ಅರಣ್ಯ ಖಾತೆ ಸಚಿವರಾಗಿ ಸೇವೆ.
ನಂತರ ೧೯೯೬ ರಲ್ಲಿ ಬಾಗಲಕೋಟೆ ಸಂಸದರಾಗಿ ಆಯ್ಕೆ (ಜೆಡಿಎಸ್).
೧೯೯೮ರಲ್ಲಿ ಸಂಸದ ಸ್ಥಾನಕ್ಕೆ ಸೋಲು (ಜೆಡಿಎಸ್ ಸ್ಪರ್ಧೆ)
೨೦೦೪ರಲ್ಲಿ ಮತ್ತೇ ಗುಳೇದಗುಡ್ಡದಿಂದ ಗೆಲುವು (ಜೆಡಿಎಸ್)
ಜೆಡಿಎಸ್ ಬಿಟ್ಟು ಸಿದ್ದರಾಮಯ್ಯ ಹೊರ ಬಂದಾಗ ಸ್ವಾಮಿ ನಿಷ್ಠೆ ಮೂಲಕ ಜೆಡಿಎಸ್ ಬಿಟ್ಟ ಮೇಟಿ.
೨೦೦೮ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮೇಟಿ.
ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಿಂದ
೨೦೦೮ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋಲು.
೨೦೧೩ರಲ್ಲಿ ಮತ್ತೇ ಬಾಗಲಕೋಟೆ ಮತಕ್ಷೇತ್ರದಿಂದ ಗೆಲುವು,
ಸಿದ್ದು ಸಂಪುಟದಲ್ಲಿ ಅಬಕಾರಿ ಖಾತೆ ಸಚಿವ.
೨೦೧೮ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋಲು (ಬಾಗಲಕೋಟೆ).
ಈ ಅವಧಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಿಟಿಡಿಎ (ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷ.
೨೦೨೩ರಲ್ಲಿ ಮತ್ತೇ ಕಾಂಗ್ರೆಸ್ ನಿಂದ ಗೆಲುವು (ಬಾಗಲಕೋಟೆ).
ಸದ್ಯ ಬಿಟಿಡಿಎ , ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಸದ್ಯ ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೂಡ ಹೌದು.

೨೦೧೬ರಲ್ಲಿ ರಾಸಲೀಲೆ ಪ್ರಕರಣ ನಡೆದಿತ್ತು‌.
ಈ ಕಾರಣದಿಂದ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯ್ತು‌.


Spread the love

Leave a Reply

Your email address will not be published. Required fields are marked *