ಹೆಂಡತಿ ನೆನಪಲ್ಲೇ ವಿಷ ಸೇವಿಸಿದ ಪತಿಯ ಸಾವು…!
1 min readಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ಹೆಂಡತಿ ತೀರಿಕೊಂಡಳೆಂದು ಮನಸ್ಸಿಗೆ ಹಚ್ಚಿಕೊಂಡು ಸಾರಾಯಿ ಕುಡಿಯಲು ಆರಂಭಿಸಿದ್ದ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಛಬ್ಬಿ ಗ್ರಾಮದ ಬಸಪ್ಪ ಹನಮಂತಪ್ಪ ನಾಯ್ಕರ ಎಂಬಾತನೇ ಪತ್ನಿಯ ಸಾವಿನಿಂದ ಬೇಸರಿಸಿಕೊಂಡು ಮದ್ಯ ಸೇವನೆ ಮಾಡಲು ಆರಂಭಿಸಿದ್ದ. ಆದರೆ, ಅತೀವ ಬೇಸರಿಸಿಕೊಂಡು ಹೊಲದಲ್ಲಿ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಸಪ್ಪನನ್ನ ಚಿಕಿತ್ಸೆಗಾಗಿ ಕಿಮ್ಸಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ. ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.
ಬಸಪ್ಪ ನಾಯ್ಕರ, ತನ್ನ ಮಡದಿಯ ಸಾವಿನ ನಂತರ ನಿರಂತರವಾಗಿ ಆಕೆಯ ನೆನಪಲ್ಲೇ ರೋಧಿಸುತ್ತ ತಿರುಗುತ್ತಿದ್ದ. ಕೆಲ ದಿನಗಳ ನಂತರ ಮದ್ಯ ಸೇವನೆ ಮಾಡುವುದನ್ನ ಕಲಿತು, ಕೊನೆಗೆ ತಾನೂ ಇಲ್ಲವಾಗಿದ್ದಾನೆ.