ಗಂಡನ ಗೆಳೆಯನೊಂದಿಗೆ ಹೋದ ಹೆಂಡತಿ: ನಾಯಿ ಛೂ ಬಿಟ್ಟು ಹಲ್ಲೆ
1 min readಹುಬ್ಬಳ್ಳಿ: ತನ್ನ ಗೆಳೆಯನೊಂದಿಗೆ ಓಡಿ ಹೋದ ಹೆಂಡತಿಯನ್ನ ಹುಡುಕುತ್ತ ಹೋದ ಗಂಡನಿಗೆ ಹೆಂಡತಿ ಮತ್ತು ಆತನ ಪ್ರಿಯಕರ ಕೂಡಿಕೊಂಡು ನಾಯಿಯನ್ನ ಛೂ ಬಿಟ್ಟು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಿಧಾಮದ ಬಳಿ ಘಟನೆ ನಡೆದಿದ್ದು, ಸಾಕು ನಾಯಿ ಛೂ ಬಿಟ್ಟು ಚಾಕುವಿನಿಂದ ದಾಳಿ ಮಾಡಿರುವ ಹೆಂಡತಿಯ ಪ್ರಿಯಕರ ಸನ್ನಿ ಇದೀಗ ಪೊಲೀಸರ ವಶದಲ್ಲಿದ್ದಾನೆ.
ಜಗಳ ಬಿಡಿಸಲು ಬಂದ ಪತಿ ಕುಟುಂಬಸ್ಥರ ಮೇಲೂ ಹಲ್ಲೆ ಮಾಡಲಾಗಿದೆ. ಸಂತೋಷ ಕಾಂಬ್ಳೆ ಸೇರಿತೆ ಇಬ್ಬರಿಗೆ ಗಾಯವಾಗಿದ್ದು ಕಿಮ್ಸ್ ಗೆ ದಾಖಲು ಮಾಡಲಾಗಿದೆ.
ಸಂತೋಷ ಪತ್ನಿ ರೂಪಾದೇವಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸನ್ನಿ. ಅದನ್ನ ನೋಡಿದ್ದ ಸಂತೋಷ ತಂದೆ. ಹೀಗಾಗಿ ಈ ವಿಷಯವನ್ನ ಪ್ರಶ್ನಿಸಲು ಹೊದಾಗ ಹಲ್ಲೆ. ಅಲ್ಲದೆ ಸಧ್ಯ ಪತ್ನಿಯನ್ನ ಮನೆಯಿಂದ ಎಸ್ಕೇಪ್ ಮಾಡಿರೋ ಸನ್ನಿ. ಮನೆ ಬಿಟ್ಟು ಹೊಗಿರೋ ರೂಪಾದೇವಿ.