ಹುಬ್ಬಳ್ಳಿ-ಮಗನಿಗೆ ಹೊಡೆಯಬೇಡ ಎಂದವ ಪತ್ನಿನಿಂದ ಕೊಲೆಯಾದ: ಅತ್ತೆಯು ಆಸ್ಪತ್ರೆಯಲ್ಲಿ..!

ಹುಬ್ಬಳ್ಳಿ: ಗಣೇಶ ಹಬ್ಬದಂದೇ ನಾರಿಮಣಿಗಳು ನಾಚುವಂತ ಪ್ರಕರಣವೊಂದು ನಡೆದಿದ್ದು, ತನ್ನ ಪತಿಯನ್ನ ಬಡಿಗೆ ಹಾಗೂ ಕೈಯಿಂದ ಗುದ್ದಿ ಕೊಲೆ ಮಾಡಿರುವ ಘಟನೆ ಸಂಭಸಿದ್ದು ಪತ್ನಿ ಸಮೇತ ಕೊಲೆಗಾರರು ಪರಾರಿಯಾಗಿದ್ದಾರೆ.
ತಾರಿಹಾಳದ ರಾಮನಗರದ ನಿವಾಸಿ ವಿರುಪಾಕ್ಷ ಭಜಂತ್ರಿ ಎಂಬಾತನೇ ಹೆಂಡತಿ ಹಾಗೂ ಬೀಗರಿಂದ ಒದೆ ತಿಂದು ಸಾವಿಗೀಡಾಗಿದ್ದು, ಪತ್ನಿ ಜ್ಯೋತಿ ಸೇರಿದಂತೆ ಈಕೆಯ ಸಂಬಂಧಿಕರಾದ ನಾಗರಾಜ, ಪದ್ಮಾ, ರೇಣುಕಾ, ಶೋಭಾ ಹಾಗೂ ಇನ್ನೋಬ್ಬ ಅಪರಿಚಿತ ವ್ಯಕ್ತಿ ನಾಪತ್ತೆಯಾಗಿದ್ದಾರೆ.
ಮಗನನ್ನ ಹೊಡೆಯಬೇಡ ಎಂದಿದ್ದನ್ನೇ ನೆಪವಾಗಿಸಿಕೊಂಡು ವಿರುಪಾಕ್ಷನನ್ನ ಮನಬಂದಂತೆ ಥಳಿಸಿದ್ದಾರೆ. ಇದನ್ನ ಬಿಡಿಸಲು ಹೋದ ವಿರುಪಾಕ್ಷನ ತಾಯಿ ಲಲಿತಮ್ಮನನ್ನ ಹೊಡೆಯಲಾಗಿದೆ. ಆದರೆ, ವಿರುಪಾಕ್ಷನಿಗೆ ಮೈ-ಕೈ ಗಳಿಗೆ ಜಾಡಿಸಿ ಒದ್ದು ತೀವ್ರವಾಗಿ ಗಾಯ ಮಾಡಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ವಿರುಪಾಕ್ಷ ಚಿಕತ್ಸೆ ಫಲಿಸದೇ ಕಿಮ್ಸನಲ್ಲಿ ಸಾವನ್ನಪ್ಪಿದ್ದು, ಆರೋಪಿಗಳ ಪತ್ತೆಗಾಗಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಜಾಲ ಬೀಸಿದ್ದಾರೆ.
ವಿರುಪಾಕ್ಷನ ಮೇಲೆ ತೀವ್ರ ಹಲ್ಲೆಯಾದಾಗಲೇ ಪ್ರಕರಣ ದಾಖಲಾಗಿತ್ತು.ಅದರ ಪ್ರತಿ ಇಲ್ಲಿರೋದು.