Posts Slider

Karnataka Voice

Latest Kannada News

ಕಾದಾಟಕ್ಕೀಳಿದ ಹಸುಗಳಿಗೆ ಪಾಠ ಮಾಡಿದ ಪುಟ್ಟ ಶ್ವಾನ: ಎಕ್ಸ್‌ಕ್ಲೂಸಿವ್ ವೀಡಿಯೋ

Spread the love

ಹುಬ್ಬಳ್ಳಿ: ಕೊರೋನಾ ವೈರಸ್‌ನ ಹಾವಳಿ ಪ್ರತಿದಿನವೂ ಹೆಚ್ಚಾಗುತ್ತಿರುವ ಸಮಯದಲ್ಲಿ ಬಹುತೇಕ ರಸ್ತೆಗಳೂ ಖಾಲಿಯಾಗಿರುವುದು ಸಹಜ. ಈ ಖಾಲಿ ರಸ್ತೆಗಳೀಗ ದನಕರುಗಳಿಗೆ ಚೆಲ್ಲಾಟವಾಡುವ ಸ್ಥಳವಾಗಿದೆ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಖಾಲಿ ರಸ್ತೆಗಳಲ್ಲಿ ಹಸುಗಳು ಚೆಲ್ಲಾಟವಾಡುವ ಬದಲು ಕಾದಾಟಕ್ಕೆ ಇಳಿದಿದ್ದವು… ಅಲ್ಲೇ ಇದ್ದ ಶ್ವಾನ ಏನೂ ಮಾಡೀತು ಗೊತ್ತಾ…? ಈ ವರದಿ ಕಂಪ್ಲೀಟ್ ನೋಡಿ.

ಗಣೇಶಪೇಟೆಯಿಂದ ಮರಾಠಾಕಾಲನಿಗೆ ಹೋಗುವ ರಸ್ತೆಯಲ್ಲೇ ಎರಡು ಹಸುಗಳು ಕಾದಾಟಕ್ಕೆ ಇಳಿದವು. ಒಂದರ ಕೋಡು ಇನ್ನೊಂದಕ್ಕೆ ತಿವಿಯಲು ಆರಂಭಿಸಿತು. ಎದುರಾಳಿ ಹಸು ಕೂಡಾ ತನ್ನದೇ ಕೋಡಿಂದ ಮತ್ತೊಂದರ ಮುಖಕ್ಕೆ, ಗುತ್ತಿಗೆ ಭಾಗಕ್ಕೆ ತಿವಿದು ಶಕ್ತಿ ಪ್ರದರ್ಶನಕ್ಕೆ ಮುಂದಾಯಿತು.
ಸಹಬಾಳ್ವೆ ನಡೆಸಿ ಬೀದಿಯಲ್ಲಿರಬೇಕಾದ ಈ ಎರಡು ಹಸುಗಳ ಕಾದಾಟ ಕ್ಷಣ ಕ್ಷಣವೂ ಹೆಚ್ಚಾಗತೊಡಗಿತು. ಅಲ್ಲಿಯೇ ಇದ್ದ ಶ್ವಾನದ ಮರಿಯೊಂದು ಸುಮ್ಮನೆ ನೋಡುತ್ತ ನಿಲ್ಲಲ್ಲಿಲ್ಲ. ಬದಲಿಗೆ ತಾನೂ ಚಿಕ್ಕದು ಎಂಬುದು ಗೊತ್ತಾದರೂ ಅವುಗಳ ಕಾಲ ಬಳಿ ಹೋಗಿ ಒದರತೊಡಗಿತು. ತನ್ನದೇ ಭಾಷೆಯಲ್ಲಿ ಹೇಳತೊಡಗಿತು.
ಜಿದ್ದಿಗೆ ಬಿದ್ದಿದ್ದ ಹಸುಗಳು ಕಾದಾಟ ಮುಂದುರೆಸಿದಾಗ ಆ ಮರಿ ಮತ್ತಷ್ಟು ಆವಾಜ್ ಹಾಕಿತು. ಅದೇಷ್ಟು ಗಟ್ಟಿಯಾಗಿ ಕೂಗತೊಡಗಿತೆಂದರೇ ಆ ಎರಡು ಹಸುಗಳು ಕಾದಾಟ ಬಿಟ್ಟು ಬೇರೆ ಬೇರೆ ರಸ್ತೆಗಳನ್ನ ಹಿಡಿದವು.
ಇಂತಹ ದೃಶ್ಯ ನೋಡಲು ಸಿಗುವುದು ಅಪರೂಪ. ಪ್ರಾಣಿಗಳಲ್ಲಿನ ಸಹಬಾಳ್ವೆಯ ಸ್ಮರಣೆ ಮಾನವನಲ್ಲಿಯೂ ಬೆಳೆಯಬೇಕಿದೆ. ಒಬ್ಬರು ಜಗಳಕ್ಕೀಳಿದಾಗ ನಿಂತು ನೋಡಿ ಮಜಾ ತೆಗೆದುಕೊಳ್ಳುವ ಜನರೇ ತುಂಬಿರುವಾಗ ಈ ಶ್ವಾನದ ಭಾವನೆ ಮನಸ್ಸನ್ನ ಗೆಲ್ಲತ್ತೆ.


Spread the love

Leave a Reply

Your email address will not be published. Required fields are marked *