ಧಾರವಾಡದಲ್ಲಿ ಮತ್ತೆ ಶುರುವಾಗಲಿದೆ ಅನಧಿಕೃತ ಲೇ ಔಟ್ ತೆರವು…!
1 min readಹುಬ್ಬಳ್ಳಿ: ಅವಳಿನಗರದ ವಿವಿಧ ಪ್ರದೇಶಗಳಲ್ಲಿ ಅನಧಿಕೃತವಾಗಿ ಅಕ್ರಮ ಬಡಾವಣೆ ನಿರ್ಮಿಸಿರುವ ಹಲವರಿಗೆ ಶಾಕ್ ನೀಡಲು ನಗರಾಭಿವೃದ್ಧಿ ಪ್ರಾಧಿಕಾರ ಸನ್ನದ್ಧವಾಗಿದೆ.
ಹುಡಾದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಶಿಸ್ತುಬದ್ಧ ಮಹಾನಗರ ನಿರ್ಮಾಣಕ್ಕೆ ಅಕ್ರಮ ತೆರವು ಅಗತ್ಯ ಎಂದು ಹುಡಾದ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದ್ದಾರೆ.
ಮಾಜಿ ಸಿಎಂ ಜಗದೀಶ ಶೆಟ್ಟರ ಕೂಡಾ ಸಭೆಯಲ್ಲಿ ಭಾಗವಹಿಸಿ, ಅವಳಿನಗರದಲ್ಲಿನ ಅನಧಿಕೃತ ಲೇಔಟ್ ಗಳನ್ನ ತೆರವು ಮಾಡಬೇಕು. ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲಬಾರದೆಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಗಶೆಟ್ಟಿಕೊಪ್ಪ ಕೆಂಪಗೇರಿಗೆ 2ಕೋಟಿ, ಧಾರವಾಡದ ಸಾಧನಕೇರಿ ಅಭಿವೃದ್ಧಿಗೆ 3 ಕೋಟಿ ರೂಪಾಯಿಗಳನ್ನ ವ್ಯಯಿಸಲು ತೀರ್ಮಾನಿಸಲಾಗಿದೆ. ಸಾಧನಕೇರಿಯ ಅಅಭಿವೃದ್ಧಿಗಾಗಿ ಶಾಸಕ ಅಮೃತ ದೇಸಾಯಿ ಮಾಡಿಕೊಂಡ ಮನವಿಗೆ ಸ್ಪಂದನೆ ಸಿಕ್ಕಿದೆ.