Posts Slider

Karnataka Voice

Latest Kannada News

ಹುಬ್ಬಳ್ಳಿಯ ಉಪನಗರ ಠಾಣೆಗೆ ಬಿಡುಗಡೆಯಲ್ಲದ ಬೇಡಿ…!

Spread the love

ಹುಬ್ಬಳ್ಳಿ: ಕೊರೋನಾ ಪ್ರಕರಣದಿಂದ ಹಲವು ರೀತಿಯ ದೃಶ್ಯಗಳನ್ನ ನೋಡುವುದಕ್ಕೆ ಅಲ್ಲಲ್ಲಿ ಕಾಣಸಿಗುತ್ತಿದ್ದು, ಸೋಜಿಗ ಪಡುವಂತವೂ ಅಚ್ಚರಿ ಮೂಡಿಸುತ್ತಿವೆ.

ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಕೊರೋನಾ ಹೆಚ್ಚುತ್ತಿರುವ ಕಾರಣದಿಂದ ಬಂದೋಬಸ್ತ್ ನಿಯೋಜನೆಯಲ್ಲಿ ತೊಡಗಿದ್ದಾರೆ. ಈ ಸಮಯದಲ್ಲಿ ಹಲವು ವಾಹನಗಳನ್ನ ನಿಯಮ ಉಲ್ಲಂಘನೆ ಮಾಡಿದ್ದರಿಂದ ವಶಕ್ಕೆ ಪಡೆಯಲಾಗಿದೆ.

ಹಲವು ವಾಹನಗಳನ್ನ ವಶಕ್ಕೆ ಪಡೆದ ವಾಹನಗಳನ್ನ ಯಾರೂ ತೆಗೆದುಕೊಂಡು ಹೋಗಬಾರದೆಂದು ಸರಪಳಿಯನ್ನ ಹಾಕಿದ್ದು, ಅವುಗಳಿಗೆ ಖೈದಿಗಳಿಗೆ ಬಳಕೆ ಮಾಡುವ ಬೇಡಿಗಳನ್ನ ಹಾಕಲಾಗಿದೆ.

ಕೊರೋನಾ ಸಮಯದಲ್ಲಿ ಕಳ್ಳತನ-ಸುಲಿಗೆಯಂತಹ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಬೇಡಿಗಳು ಇಂತಹ ಕೆಲಸಗಳಿಗೆ ಸಹಾಯವಾಗುತ್ತಿರಬಹುದಲ್ಲವೇ..!


Spread the love

Leave a Reply

Your email address will not be published. Required fields are marked *

You may have missed