ಹುಬ್ಬಳ್ಳಿಯಲ್ಲಿ ನಾಯಿಕೊಡೆಗಳಂತೆ ಹಬ್ಬಿರುವ “ಸ್ಪಾ”ಗಳಲ್ಲಿ ವೇಶ್ಯಾವಾಟಿಕೆ…!?

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿರುವ ಐವತೈದಕ್ಕೂ ಹೆಚ್ಚು ಸ್ಪಾಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಅನುಮಾನಗಳು ಆರಂಭಗೊಂಡಿದ್ದು, ಈ ಬಗ್ಗೆ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಪಾಲಿಕೆ ಅಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಡಿಕೊಂಡಿರುವ ಮನವಿ ಇಲ್ಲಿದೆ…
ಗೆ
ಮಾನ್ಯ ಆಯುಕ್ತರು
ಹು.ಧಾ.ಮ.ಪಾ
ಹುಬ್ಬಳ್ಳಿ
ದಿನಾಂಕ
17/6/2023
ವಿಷಯ: ಸ್ಪಾ ಮುಕ್ತ ಹುಬ್ಬಳ್ಳಿ ಧಾರವಾಡ ಕುರಿತು
ಮಾನ್ಯರೇ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 55ಕ್ಕು ಹೆಚ್ಚು ಸ್ಪಾ ಮಸಾಜ್ ಸೆಂಟರ್ ಗಳು ತೆರದಿವೆ, ಸುಪ್ರೀಂ ಕೋರ್ಟ್ ನಿಯಮ ಮೀರಿ ಪುರುಷರಿಗೆ ಮಹಿಳೆಯರಿಂದ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎನ್ನುವ ಆರೋಪ ಪದೇ ಪದೇ ಕೇಳಿ ಬರುತ್ತಿದೆ ಇದು ಖಂಡನೀಯ.
ಪಾಲಿಕೆ ಆರೋಗ್ಯ ಅಧಿಕಾರಿಗಳು ಸಲೂನ್ ಹಾಗೂ ಸ್ಪಾ ಹೆಸರಿನಲ್ಲಿ ಲೈಸೆನ್ಸ್ ನೀಡಿದರೆ, ಕೆಲ ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ ಸ್ಪಾ ನಡೆಸುವ ಮೂಲಕ ಅಕ್ರಮ ಎಸಗುತ್ತಿರುವದು ವ್ಯಾಪಕವಾಗಿ ಕಂಡು ಬರುತ್ತಿದೆ, ಹುಬ್ಬಳ್ಳಿ ಧಾರವಾಡ ನಗರದಲ್ಲಿ ಇದೊಂದು ಅಕ್ರಮ ದಂಧೆಯಾಗಿ ಮಾರ್ಪಾಡು ಆಗಿದ್ದು ಸಮಾಜಕ್ಕೆ ಇದು ಮಾರಕವಾಗಿದೆ
ಉತ್ತರ ಭಾರತ, ದೆಹಲಿ ಹಾಗೂ ಮುಂಬೈ ಮೂಲದಿಂದ ಮಹಿಳೆಯರನ್ನು ಕರೆತರಿಸಿ ಹಣದಾಸೆಗೆ ಅಕ್ರಮ ದಂಧೆಯಲ್ಲಿ ಪಾಲ್ಗೊಳ್ಳುವಂತೆ ಈ ಸ್ಪಾ ಮಾಲೀಕರು ಒತ್ತಡ ಹಾಕುತ್ತಿದ್ದಾರೆ ಇಂತಹ ಅಮಾಯಕ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವುದು ಅಧಿಕಾರಿಗಳ ಕರ್ತವ್ಯ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ವಿಶೇಷ ತಂಡ ರಚನೆ ಮಾಡಿ,ಇಂತಹ ಮಳಿಗೆಗಳ ಮೇಲೆ ಕೂಲಂಕುಶವಾಗಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಬೇಕು
ಇವುಗಳ ಲೈಸೆನ್ಸ್ ಸಲೂನ್ ಹೆಸರಿನಲ್ಲಿ ಇರುವುದು ಕೂಡ ದುರುಪಯೋಗ ಆಗುತ್ತಿದ ಇದರ ಬಗ್ಗೆ ಪ್ರತ್ಯೇಕ ತಂಡ ರಚಿಸಿ ಇಂತಹ ಅಕ್ರಮಗಳನ್ನು ತಡೆಗಟ್ಟಬೇಕು
ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ತನ್ನದೇ ಆದ ಘನತೆ-ಗೌರವ ಇದ್ದು ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ
ಧನ್ಯವಾದಗಳೊಂದಿಗೆ
ರಜತ್ ಉಳ್ಳಾಗಡ್ಡಿಮಠ
ಅಧ್ಯಕ್ಷರು
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ
ಈ ಪ್ರತಿಯನ್ನು ಕ್ರಮಕ್ಕಾಗಿ ಇವರಿಗೆ ತಲುಪಿಸಲಾಗುತ್ತದೆ
ಮಾನ್ಯ ಆಯುಕ್ತರು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷನರೆಟ್ .
ಮಾನ್ಯ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಧಾರವಾಡ.