ಹುಬ್ಬಳ್ಳಿಯ “ಸಿಎಂ ನಿವಾಸದ” ಕೂಗಳತೆ ದೂರದಲ್ಲೇ ಕೊರೋನಾಂತಕ: ಶಾಲೆ ರವಿವಾರದವರೆಗೆ ಕ್ಲೋಸ್…!

ಹುಬ್ಬಳ್ಳಿ: ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಕೂಗಳತೆ ದೂರದಲ್ಲಿರುವ ಖಾಸಗಿ ಶಾಲೆಯಲ್ಲಿ ಕೊರೋನಾ ಆತಂಕ ಹೆಚ್ಚಾಗಿದ್ದು, ಇಂದಿನಿಂದ ರವಿವಾರದವರೆಗೆ ಶಾಲೆಯನ್ನ ರಜೆ ಕೊಡಲಾಗಿದೆ.
ಎಂದಿನಂತೆ ಶಾಲೆ ಇಂದು ಆರಂಭವಾಗಿತ್ತಾದರೂ, ವಿದ್ಯಾರ್ಥಿಯ ಕುಟುಂಬದಲ್ಲಿ ಕೊರೋನಾ ಕಂಡು ಬಂದ ಹಿನ್ನೆಲೆಯಲ್ಲಿ ಎಲ್ಲರನ್ನೂ ಮನೆಗೆ ಕಳಿಸಲಾಗಿದೆ. ಅಷ್ಟೇ ಅಲ್ಲ, ಎಲ್ಲ ಶಿಕ್ಷಕ ವೃಂದ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಮಾತನಾಡಿದ್ದಾರೆ ನೋಡಿ.
ಧಾರವಾಡದ ಕಾಲೇಜಿನಲ್ಲಿ ಕೊರೋನಾ ಕಂಡು ಬಂದ ನಂತರ ಜಿಲ್ಲೆಯಲ್ಲಿ ಮತ್ತೆ ಕೊರೋನಾಂತಕ ಆರಂಭವಾಗಿದ್ದು, ಜನರು ಜಾಗೃತೆಯನ್ನ ವಹಿಸಬೇಕಾದ ಅವಶ್ಯಕತೆಯಿದೆ.