ಹುಬ್ಬಳ್ಳಿ ಗ್ರಾಮೀಣದಲ್ಲಿ “ರಣಬೇಟೆ”- ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಟೀಂ ದಾಳಿ…
1 min readಹುಬ್ಬಳ್ಳಿ: ಸಾರ್ವಜನಿಕರ ನೆಮ್ಮದಿಗೆ ಬೆಂಕಿಯಿಡುವ ಜೊತೆಗೆ ಕಾನೂನು ಬಾಹಿರ ಚಟುವಟಿಕೆಗಳನ್ನ ನಡೆಸುತ್ತಿರುವ ದುರಾತ್ಮರ ವಿರುದ್ಧ ದಾಳಿ ನಡೆಸಿ, ರಣಬೇಟೆಯಾಡಲಾಗುತ್ತಿದೆ.
ಹೌದು… ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜೂಜಾಟ, ಮಟಕಾ, ಅಕ್ರಮ ಮದ್ಯ ಮಾರಾಟ ಹಾಗೂ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿರುವವರ ವಿರುದ್ಧ ಸಮರ ಸಾರಲಾಗಿದ್ದು, ಒಂದೇ ವಾರದಲ್ಲಿ 22 ಕ್ಕೂ ಹೆಚ್ಚು ಜನರನ್ನ ಬಂಧನ ಮಾಡಲಾಗಿದೆ.
ಪ್ರಕರಣದ ವಿವರ…
* ಬ್ಯಾಹಟ್ಟಿ ಗ್ರಾಮದಲ್ಲಿ ಅಂದರ್-ಬಾಹರ್ ಪ್ರಕರಣ: 5 ಜನರ ಬಂಧನ, 8000 ರೂ. ವಶ
* ಅಂಚಟಗೇರಿಯಲ್ಲಿ ಮಟಕಾ ದಂಧೆ: ಓರ್ವನ ಬಂಧನ, 1500 ರೂ. ವಶ
* ಪಾಳೆ ಗ್ರಾಮದಲ್ಲಿ ಅಂದರ್-ಬಾಹರ್: 7 ಜನರ ಬಂಧನ, 22000 ರೂ. ವಶ
* ಸುಳ್ಳ ಗ್ರಾಮದಲ್ಲಿ ಇಸ್ಪೀಟ್: 5 ಜನರ ಬಂಧನ, 7000 ರೂ. ವಶ
* ನೂಲ್ವಿ ದಾಬಾದಲ್ಲಿ ಅಕ್ರಮ ಮದ್ಯ: ಮೂವರ ಬಂಧನ, 2 ಬಾಕ್ಸ್ ಮದ್ಯ ವಶ
* ವರೂರು ಗ್ರಾಮದಲ್ಲಿ ಕ್ರಿಕೆಟ್ ಬೆಟ್ಟಿಂಗ್: ವಿನಾಯಕ ಶಿಲ್ಲಿ ಬಂಧನ, 11000 ರೂ. ವಶ
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ನೇತೃತ್ವದಲ್ಲಿ ಪಿಎಸ್ಐಗಳಾದ ಸಚಿನ ಅಲಮೇಲಕರ, ಚಾಮುಂಡೇಶ್ವರಿ ಸೇರಿದಂತೆ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.