ಶಿಕ್ಷಕರ ಚುನಾವಣೆ: ಹುಬ್ಬಳ್ಳಿ ಗ್ರಾಮೀಣ ವಲಯ ಅವಿರೋಧ ಆಯ್ಕೆ..!
1 min readಹುಬ್ಬಳ್ಳಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯ ನಾಮಪತ್ರ ಸಲ್ಲಿಕೆ ಇಂದು ಕೊನೆ ದಿನವಾಗಿತ್ತು. ಹುಬ್ಬಳ್ಳಿ ಗ್ರಾಮೀಣ ವಲಯದ ಒಟ್ಟು 14 ಸ್ಥಾನಗಳಿಗೆ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.
ಶಿಕ್ಷಕರ ಚುನಾವಣೆ ಬಹುತೇಕವಾಗಿ ಹೆಚ್ಚು ಪ್ರಾಶಸ್ತ್ಯವನ್ನ ಪಡೆದುಕೊಂಡು ಚುನಾವಣೆ ನಡೆಯುತ್ತಿತ್ತು. ಪ್ರತಿಸಲವೂ ಚುನಾವಣೆ ನಿರಂತರವಾಗಿ ನಡೆಯುತ್ತಿತ್ತು. ಈ ಬಾರಿಯೂ ಚುನಾವಣೆ ನಡೆಯುವ ಸಾಧ್ಯತೆಯಿತ್ತು. ಆದರೆ, ಈ ಬಾರಿ ಗ್ರಾಮೀಣ ವಲಯದಲ್ಲಿ ಇತಿಹಾಸ ನಿರ್ಮಾಣವಾಗಿದೆ.
ಒಟ್ಟು 14 ಸ್ಥಾನಗಳ ಪೈಕಿ ಐವರು ಮಹಿಳಾ ಶಿಕ್ಷಕಿಯರು ಹಾಗೂ 14 ಶಿಕ್ಷಕರು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ನಾಳೆಗೆ ಐದು ಜನ ಶಿಕ್ಷಕರು ನಾಮಪತ್ರ ಹಿಂಪಡೆಯುವ ಮೂಲಕ ಶಿಕ್ಷಕರು ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಇತಿಹಾಸವನ್ನ ಸೃಷ್ಟಿ ಮಾಡಲಿದ್ದಾರೆಂದು ಹೇಳಲಾಗಿದೆ.
ಶಿಕ್ಷಕ ವಲಯದಲ್ಲಿ ಹಲವು ಸಂಘಟನೆಗಳು ಕಾರ್ಯನಿರ್ವಹಣೆ ಮಾಡುತ್ತಿದ್ದರೂ, ಚುನಾವಣೆ ಸಮಯದಲ್ಲಿ ಬೇರೆಯಾಗಿಯೇ ಸ್ಪರ್ಧೆ ಮಾಡುತ್ತಿದ್ದರು. ಆದರೆ, ಈ ಬಾರಿ ಎಲ್ಲ ಸಂಘದ ಪದಾಧಿಕಾರಿಗಳು ಒಗ್ಗಟ್ಟಾಗಿ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುವುದನ್ನ ರೂಢಿಸಿಕೊಂಡಿದ್ದು, ಕೊರೋನಾ ಸಮಯದಲ್ಲಿ ಶಿಕ್ಷಕ ಸಮೂಹಕ್ಕೆ ಮತ್ತಷ್ಟು ಒಳ್ಳೆಯದಾಗಿದೆ.