Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಹೈಟೆಕ್ ಮಟಕಾ-ಹಳಬರನ್ನ ಕರೆದು ‘161’ ಮಾಡುತ್ತಿರೋ ‘ಕಾಸು ಬಾಕರು’…

1 min read
Spread the love

ಹುಬ್ಬಳ್ಳಿ: ಅವಳಿನಗರದಲ್ಲಿ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಹಲವರು ರೀತಿಯಲ್ಲಿ ಪೊಲೀಸ್ ವ್ಯವಸ್ಥೆಯನ್ನ ಸುಧಾರಣೆ ಮಾಡಲು ಪ್ರಯತ್ನವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾಗ, ಕೆಲವರು ಮಾತ್ರ ತಮ್ಮ ‘161’ ಮೆಂಟಾಲಿಟಿಯನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ವಾಣಿಜ್ಯನಗರದಲ್ಲೀಗ ಹೈಟೆಕ್ ಮಟಕಾ ಶುರುವಾಗಿದೆ. ಇದೀಗ ನಿಮಗೆ ಚೀಟಿಗಳು ಸಿಗೋದಿಲ್ಲ. ಬದಲಿಗೆ ಮೊಬೈಲ್ ಗಳಲ್ಲಿ ಅಂಕಿ-ಸಂಖ್ಯೆಗಳು ಕಾಣತೊಡಗಿವೆ. ಅಂತವರನ್ನ ಬೆಳೆಸುತ್ತಿರುವ ಕೆಲವು ಫುಡಾರಿಗಳಿಗೆ ರಕ್ಷಕರೆನಿಸಿಕೊಂಡ ಕೆಲವರು ಆಪ್ತರಾಗಿದ್ದಾರೆ.

ಮಟಕಾ ದಂಧೆಯನ್ನ ಬಿಟ್ಟವರನ್ನ ಕರೆ ಕರೆದು ಕೇಸ್ ಹಾಕುವ ನೆಪದಲ್ಲಿ ಹಣವನ್ನ ಪೀಕುವುದಕ್ಕೂ ಕೆಲವು ‘ಹೊಸಬರು’ ಮುಂದಾಗಿರುವುದು ರಹಸ್ಯವಾಗಿ ಉಳಿದಿಲ್ಲ.

ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳಡಿಯಲ್ಲಿಯೇ ಇಂತಹದಕ್ಕೆ ಮುಂದಾಗಿರುವ ‘161’ ಗಿರಾಕಿಗಳಿಗೆ ಪಾಠವನ್ನ ಬುದ್ಧಿವಂತರು ಮಾಡಬೇಕಿದೆ.


Spread the love

Leave a Reply

Your email address will not be published. Required fields are marked *

You may have missed