ಅವತ್ತು ಸಿಕ್ತಂತೆ.. 13ಕ್ಕೆ ತಂದು ಕಳಿಸಿದ್ರಂತೆ.. 18ಕ್ಕೆ ಕನ್ ಫರ್ಮ್ ಆಗಿ ಜೈಲಿಗೆ ಕಳಿಸಿದ್ರಂತೆ: ತೇಪೆ ಹಚ್ಚಲು ‘ಎಸಿಪಿ’ ವರದಿ ರೆಡಿ…
1 min readಹುಬ್ಬಳ್ಳಿ: ನಗರದ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ತಲ್ವಾರ ಆರೋಪಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಸತ್ಯದ ಬೆನ್ನು ಹತ್ತಿದ್ದಾರೆಂದು ಗೊತ್ತಾಗಿದೆ.
ನನವೆಂಬರ್ 8ರಂದು ನಡೆದಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ನವೆಂಬರ್ 13ಕ್ಕೆ ಕರೆ ತಂದು ಬಿಟ್ಟು ಕಳಿಸಿದ್ದರು. ಇದಾದ ಮೇಲೆ 18ಕ್ಕೆ ಮತ್ತೆ ಬಂಧನ ಮಾಡಿ ಜೈಲಿಗೆ ಕಳಿಸಿದ್ದಾರೆ.
ಪ್ರಕರಣ ಬೇರೆ ಸ್ವರೂಪ ಪಡೆಯುತ್ತಿದ್ದ ಹಾಗೇ ಇಡೀ ಪ್ರಕರಣವನ್ನ ಬೇರೆ ರೀತಿಯಲ್ಲಿ ಪೊಲೀಸ್ ಕಮೀಷನರ್ ಮುಂದಿಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಹೇಳಲಾಗಿದೆ.
ಇಡೀ ಪ್ರಕರಣವನ್ನ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ನೂತನ ಡಿಸಿಪಿಯವರಿಗೆ ವಹಿಸಲಿದ್ದಾರೆಂದು ಗೊತ್ತಾಗಿದ್ದು, ಎಸಿಪಿಯವರ ಪಾತ್ರದ ಬಗ್ಗೆಯೂ ವಿಚಾರಣೆ ನಡೆಯಲಿದೆ ಎಂದು ಹೇಳಲಾಗಿದೆ.
ನವೆಂಬರ್ 8, ನವೆಂಬರ್ 13 ಮತ್ತು ನವೆಂಬರ್ 18 ಮೂರು ದಿನದ ಸಮಗ್ರ ಮಾಹಿತಿಯನ್ನು ಪೊಲೀಸ್ ಕಮೀಷನರ್ ಸಂಗ್ರಹ ಮಾಡಲಿದ್ದಾರೆ. ಆ ಮೂರು ದಿನದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲಿದ್ದಾರೆಂದು ಗೊತ್ತಾಗಿದೆ.