ಬೆಳ್ಳಂಬೆಳಿಗ್ಗೆ ಕೈ ಮುಗಿದ ಇನ್ಸಪೆಕ್ಟರ್ ಶ್ರೀಕಾಂತ ತೋಟಗಿ…!

ಹುಬ್ಬಳ್ಳಿ: ನಗರದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ತಪಾಸಣೆಗೆ ಇಳಿದ ಉತ್ತರ ಸಂಚಾರಿ ಠಾಣೆ ಇನ್ಸಪೆಕ್ಟರ್ ಶ್ರೀಕಾಂತ ತೋಟಗಿ ಬೆಳ್ಳಂಬೆಳಿಗ್ಗೆ ತಪ್ಪು ಮಾಡಿದವರ ಕೈ ಮುಗಿಯುವ ಸ್ಥಿತಿಗೆ ತಲುಪಿದ್ದರು.

ಬೆಳಿಗ್ಗೆ ಆರು ಗಂಟೆಯಿಂದ ಎಂಟು ಗಂಟೆಯವರೆಗೆ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರೂ, ಅದನ್ನ ಮೀರಿ ಸಂಚರಿಸುತ್ತಿದ್ದ ವಾಹನಗಳನ್ನ ಪೊಲೀಸರು ತಪಾಸಣೆ ಮಾಡುತ್ತಿದ್ದರು.
ಈ ವೇಳೆಯಲ್ಲಿ ನಿಯಮ ಉಲ್ಲಂಘಿಸಿದ್ದರಿಂದ ಕಾರನ್ನ ಸೀಜ್ ಮಾಡುವುದಾಗಿ ಹೇಳಿದರೂ, ಕಾರು ಮಾಲೀಕರೋರ್ವರು ಇನ್ಸಪೆಕ್ಟರ್ ಅವರಿಗೆ ಸಮಜಾಯಿಸಿ ನೀಡಲು ಮುಂದಾದರು. ಇದರಿಂದ ಬೇಸರಗೊಂಡು, ‘ನಿಮಗೆ ಕೈ ಮುಗಿಯುತ್ತೇನೆ, ಹಾಗೇ ಮಾಡಲು ಬರುವುದಿಲ್ಲವೆಂದು’ ತೋಟಗಿ ಹೇಳುವಂತಾಯಿತು.
ಇದಕ್ಕೆ ಬದಲಾಗಿ ಕಾರು ಮಾಲೀಕರು ಕೈ ಮುಗಿದು, ದಂಡವನ್ನ ಕೊಟ್ಟು ಮನೆಯತ್ತ ಹೋಗಬೇಕಾದ ಪ್ರಸಂಗ ನಡೆಯಿತು.