“ದರೋಡೆ” ಚೇಸಿಂಗ್ ಮಾಡಿದ “ಶೂರರು ಯಾರೂ ಗೊತ್ತೆ”- ಕಿಲಾಡಿ ಜೋಡಿಗಳ ಕಹಾನಿ ಇಲ್ಲಿದೆ ನೋಡಿ…

ಹುಬ್ಬಳ್ಳಿ: ನಗರದ ಜನನಿಬೀಡ ಪ್ರದೇಶದಲ್ಲಿ ಚಾಕು ತೋರಿಸಿ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನ ಯಾವುದೇ ಆಯುಧಗಳು ಇಲ್ಲದೇ ಹಿಡಿದಿರುವುದು ಹುಬ್ಬಳ್ಳಿ ನಗರದ ಇಬ್ಬರು ಪೊಲೀಸರು.

ಹೌದು.. ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪ್ರವೀಣಕುಮಾರ ಪಾಟೀಲ, ಬ್ಯಾಂಕಿನ ಉದ್ಯೋಗಿಯನ್ನ ಬೆದರಿಸಿ, 7ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನ ದೋಚಿಕೊಂಡು ಹೋಗುತ್ತಿದ್ದ. ಅದೇ ಸಮಯದಲ್ಲಿ ಬೈಕಿನಿಂದ ಬಂದ ವ್ಯಕ್ತಿಯೋರ್ವ ಘಟನೆಯ ಮಾಹಿತಿ ನೀಡುತ್ತಿದ್ದ ಹಾಗೇ ಎಚ್ಚೆತ್ತುಗೊಂಡಿದ್ದು, ಹುಬ್ಬಳ್ಳಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಉಮೇಶ ಬಂಗಾರಿ. ನೇರವಾಗಿ ಎದುರಿಗೆ ಹೋದವರೇ ಎದೆಯ ಮೇಲೆ ಕೂತಾಗಲೇ, ಉಪನಗರ ಠಾಣೆಯ ಪೊಲೀಸ್ ಮಂಜುನಾಥ ಹಾಲವರ ಹಿಡಿದು ಹೆಡಮುರಿಗೆ ಕಟ್ಟಿದ್ದಾರೆ.
2005 ಬ್ಯಾಚಿನ ಮಂಜುನಾಥ ಹಾಲವರ ದಕ್ಷತೆಯಿಂದ ಕೆಲಸ ಮಾಡುತ್ತ ಬಂದಿದ್ದು, ಯಾವುದೇ ಭಯವಿಲ್ಲದೇ ಆರೋಪಿಯನ್ನ ಹಿಡಿದಿದ್ದಾರೆ. 2007ರ ಬ್ಯಾಚಿನ ಉಮೇಶ ಬಂಗಾರಿ, ಕೂಡಾ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ.

ಆರೋಪಿಯ ಬಳಿ ಚಾಕುಯಿದ್ದರೂ, ಚೂರು ಭಯ ಬೀಳದೇ ಕರ್ತವ್ಯ ನಿರ್ವಹಿಸಿರುವ ಇಬ್ಬರು ಪೊಲೀಸರಿಗೆ ನೀವೂ ಶುಭಾಶಯ ತಿಳಿಸಿ. ಇಂತವರಿರುವುದರಿಂದಲೇ ನಾವು-ನೀವೂ ನೆಮ್ಮದಿಯಿಂದ ಸಮಾಜದಲ್ಲಿ ಬದುಕುತ್ತಿದ್ದೇವೆ.. ಅಲ್ಲವೇ..
ಉಮೇಶ ಬಂಗಾರಿ- 9740921757
ಮಂಜುನಾಥ ಹಾಲವರ- 7411881775