ಹುಬ್ಬಳ್ಳಿ ಎಪಿಎಂಸಿ ಠಾಣೆಯಲ್ಲಿ “ಗಾಂಜಾ ಕಳ್ಳ ಪೊಲೀಸರು”: ಇನ್ಸಪೆಕ್ಟರ್ ಚೌಗಲೆಯವರೇ ನಿಮಗೆಷ್ಟು ಸಿಕ್ಕಿದೆ…!?

ಹುಬ್ಬಳ್ಳಿ: ಇದು ಅವಳಿನಗರದ ಪೊಲೀಸರು ತಲೆತಗ್ಗಿಸುವ ತನಿಖಾ ವರದಿ. ಇಲ್ಲಿ ದಕ್ಷ ಅಧಿಕಾರಿಗಳಾದ ಕಮೀಷನರ್ ಲಾಬುರಾಮ್, ಡಿಸಿಪಿ ಕೆ.ರಾಮರಾಜನ್ ಕೂಡಾ ಅಸಹ್ಯ ಪಡುವಂತಹದ್ದನ್ನ ಹುಬ್ಬಳ್ಳಿ ಎಪಿಎಂಸಿ ಠಾಣೆಯ ಹಲವು ಪೊಲೀಸರು ಮತ್ತು ಹುಬ್ಬಳ್ಳಿ ಗೋಕುಲ ಠಾಣೆಯ ಓರ್ವ ಮಹಿಳಾ ಪೊಲೀಸ್, ಜೊತೆಗೊಬ್ಬ ತನ್ನನ್ನ ತಾನು ಬಹದ್ಧೂರ ಗಂಡು ಎಂದು ತಿಳಿದುಕೊಂಡಿರೋ ಪೊಲೀಸನೋರ್ವ, ಗಾಂಜಾವನ್ನ ಕಳ್ಳತನ ಮಾಡಿರುವ ಪ್ರಕರಣವಿದು.
ಹೌದು.. ನಗರದಲ್ಲಿ ನಡೆಯುತ್ತಿರುವ ಗಾಂಜಾ ಮಾರಾಟದಿಂದ ರೋಸಿ ಹೋದ ವ್ಯಕ್ತಿಯೋರ್ವ ನವನಗರ ಎಪಿಎಂಸಿ ಠಾಣೆಯ ನಾಗರಾಜ್ ಎಂಬ ಪೊಲೀಸರಿಗೆ ಮಾಹಿತಿಯನ್ನ ಕೊಡ್ತಾನೆ. ಆದರೆ, ಮಂದಿಯ ಹಣದಲ್ಲಿ ಮನೆಯವರಿಗೆ ವಸ್ತುಗಳನ್ನ ಕೊಡಿಸಬೇಕೆಂಬ ಹಪಾಹಪಿಯಲ್ಲಿರೋ ಪಟಾಲಂ, ಆರೋಪಿಗಳನ್ನ ಆಟೋ ಸಮೇತ ಒಂದೂವರೆ ಕೆಜಿ ಗಾಂಜಾವನ್ನ ವಶಕ್ಕೆ ಪಡೆದುಕೊಳ್ಳುತ್ತಾರೆ.
ಈ ಆಡೀಯೋ ಕೇಳಿ..
ಅವತ್ತು ಸಾಮಾಜಿಕ ಕಳಕಳಿಯಿದ್ದವ ಪೊಲೀಸರಿಗೆ ಮಾಹಿತಿ ನೀಡಿದ್ದರೇ, ಆಮೇಲೆ ಎಪಿಎಂಸಿ ಠಾಣೆಯ ನಾಗರಾಜ ಆ್ಯಂಡ್ ಪಟಾಲಂ ದಂಧೆಗೆ ನಿಂತು ಬಿಡತ್ತೆ. ಅದೇ ಠಾಣೆಯ ವಿಕ್ರಮ ಪಾಟೀಲ, ಶಶಿ ನಾಯಕ ಸೇರಿದಂತೆ ಹಲವರು ಹಂಚಿಕೊಂಡಾಟ ಶುರುವಿಟ್ಟುಕೊಳ್ಳುತ್ತಾರೆ. ಅದೇ ಸಮಯದಲ್ಲಿ ಸರಿಯಾಗಿ “ರೋಗಿ ಬಯಸಿದ್ದು ಹಾಲು ಅನ್ನ, ಡಾಕ್ಟರ್ ಹೇಳಿದ್ದು…” ಎಂಬಂತೆ ಗೋಕುಲ ಠಾಣೆಯಿಂದ ಹೊನ್ನಪ್ಪನವರ ಎಂಬ ಪೊಲೀಸ್ ಕಾಲ್ ಮಾಡಿ, ಪ್ರಮುಖ ಆರೋಪಿಯ ಬಿಡುಗಡೆಗೆ ಹಣವನ್ನ ಫಿಕ್ಸ್ ಮಾಡ್ತಾರೆ. ನವನಗರದ ಎಪಿಎಂಸಿ ಠಾಣೆಯ “ಹಸಿದ ನರಿಗಳು” ಮೊದ ಮೊದಲು ಎಂಟು ಸಾವಿರಕ್ಕೆ ಒಪ್ಪಿಗೆ ಕೊಡ್ತಾರೆ. ಅದೇ ಹೊನ್ನಪ್ಪನವರ ಎರಡು ಸಾವಿರ “ಆನ್ ಇಟ್ಟು” ದಿಲ್ ಶಾದ್ ಎಂಬ ಮಹಿಳಾ ಪೇದೆಗೆ “ಬಾಯಿ ಹತ್ತ್ ಕೊಡ್ಸ್, ಬಿಡ್ತಾರ್” ಎಂದು ಹೇಳಿದರೇ, ಈ ಮಹಾನ್ ಮಹಿಳಾ ಪೇದೆ ಆರೋಪಿಗೆ ಮೂವತ್ತು ಸಾವಿರ ಕೊಡುವಂತೆ ಹೇಳುತ್ತಾಳೆ. ಹೀಗೆ ದಂಧೆ ಮುಂದುವರೆಯುತ್ತೆ. ಮಹಾನ್ “ಕಳ್ಳರ ಗುರು” ಗುರುವಿನಂತೆ ಆ ಮಹಿಳಾ ಪೇದೆ ಹೇಗೆ ಪೋಸ್ ಕೊಟ್ಟಿದ್ದಾಳೆ ನೀವೇ ನೋಡಿ..
ಈಗ ಅಸಲಿ ವಿಷಯಕ್ಕೆ ಬರೋದಾದ್ರೇ, ವಶಕ್ಕೆ ಪಡೆದ ಅಮರಗೋಳದ ಅರ್ಜುನ, ಜೋಡಳ್ಳಿಯ ಮುತ್ತು, ಆತನ ಸಂಗಡಿಗರನ್ನ ಬಿಟ್ಟು ಕಳಿಸಲಾಗಿದೆ. ಅದೇಲ್ಲಕ್ಕಿಂತ ಮಿಗಿಲಾಗಿ ವಶಕ್ಕೆ ಪಡೆದುಕೊಂಡ ಸುಮಾರು ಒಂದೂವರೆ ಕೆಜಿ ಗಾಂಜಾವನ್ನ ಪೊಲೀಸರೇ ನುಂಗಿ ನೀರು ಕುಡಿದಿದ್ದಾರೆ.
ಇಂತಹ ಪೊಲೀಸರು ವ್ಯವಸ್ಥೆಯನ್ನ ಅಧೋಗತಿಗೆ ತೆಗೆದುಕೊಂಡು ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ಸಪೆಕ್ಟರ್ ವಿಶ್ವನಾಥ ಚೌಗಲೆಯ ಸುತ್ತಲೂ ಹಣಬಾಕ ಪೊಲೀಸರು ಸುತ್ತುವರಿದಿದ್ದು, ಈ ಪ್ರಕರಣದಲ್ಲಿ ಅವರು ಎಷ್ಟು ಪಡೆದಿದ್ದಾರೆಂಬ ಸಂಶಯ ಮೂಡುತ್ತಿದೆ.
ಇಂತಹವರನ್ನ ದಕ್ಷ, ಪ್ರಾಮಾಣಿಕ ಅಧಿಕಾರಿಗಳಾದ ಪೊಲೀಸ್ ಕಮೀಷನರ್ ಲಾಬುರಾಮ್ ಮತ್ತು ಡಿಸಿಪಿ ಕೆ.ರಾಮರಾಜನ್ ಸುಮ್ಮನೆ ಬಿಡೋದಿಲ್ಲವೆಂಬ ನಂಬಿಕೆಯಿದೆ.. ಹೌದಲ್ವಾ…!?