ಹುಬ್ಬಳ್ಳಿ ಗಿರಣಿಚಾಳ ಕೊಲೆ- ಆರೋಪಿ ವಿಶಾಲ ಆಲೂರ ಬಂಧನ

ಹುಬ್ಬಳ್ಳಿ: ನಗರದ ಗಿರಣಿಚಾಳ ಪ್ರದೇಶದಲ್ಲಿ ವರಸೆಯಲ್ಲಿ ಮಾವನಾಗಬೇಕಾದ ವ್ಯಕ್ತಿಯನ್ನೇ ಹಿಗ್ಗಾ ಮುಗ್ಗಾ ಥಳಿಸಿ, ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಕೆಲವೇ ಸಮಯದಲ್ಲಿ ಆರೋಪಿಯನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಿರಣಿಚಾಳದ ನಿವಾಸಿಯಾಗಿದ್ದ ರವಿ ಮುದ್ದಿನಕೇರಿಯನ್ನ ಹೊಡೆದು ತೀವ್ರ ಗಾಯಗೊಳಿಸಿ, ಸಾವಿಗೀಡಾಗುವಂತೆ ಮಾಡಿದ್ದ ವಿಶಾಲ ಆಲೂರ ಎಂಬ ನಟೋರಿಯಸ್ ಯುವಕನನ್ನ ಉಪನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.
ಮರಳು ದಂಧೆ ಮಾಡುತ್ತಿದ್ದ ರವಿಯ ಜೊತೆಗೆ ಜಗಳಕ್ಕೆ ಇಳಿದಿದ್ದ ವಿಶಾಲ, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಮೂರು ಮಕ್ಕಳ ತಂದೆ ರವಿ, ಕಿಮ್ಸನಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.
ವಿಶಾಲ ಆಲೂರ ಈಗಾಗಲೇ ರಾಬರಿ ಹಾಗೂ ಹೊಡೆದಾಟದ ಪ್ರಕರಣದಲ್ಲಿ ಭಾಗಿಯಾಗಿದ್ದ. ಈಗ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ನಟೋರಿಯಸ್ ವಿಶಾಲ ಆಲೂರ ಇನ್ಸಟ್ರಾಗ್ರಾಂನಲ್ಲಿ ಪೋಟೊಗಳನ್ನ ಅಪಲೋಡ್ ಮಾಡುವುದಕ್ಕಾಗಿಯೇ ಹೆಚ್ಚು ಖರ್ಚು ಮಾಡುತ್ತಿದ್ದನೆಂದು ತಿಳಿದು ಬಂದಿದೆ.