ಹುಬ್ಬಳ್ಳಿಯ “ದೊಡ್ಡವರ” ಮಗಳ ಪ್ರೇಮ ಪ್ರಕರಣ- ಹೈರಾಣಾದ ಪೊಲೀಸರಿಗೆ ಗದಗನಲ್ಲಿ ಸಿಕ್ಕ ಜೋಡಿ…!

ಹುಬ್ಬಳ್ಳಿ: ನಗರದ ಪ್ರಮುಖ ರಾಜಕಾರಣಿಯೋರ್ವರ ಮಗಳು ಮನೆ ಬಿಟ್ಟು ಹೋದ ಪ್ರಕರಣವೊಂದು ಕೇಸ್ ದಾಖಲು ಮಾಡಿಕೊಳ್ಳದೇ ಪೊಲೀಸರಿಗೆ ತಲೆ ನೋವಾದ ಪ್ರಸಂಗ ಬೆಳಕಿಗೆ ಬಂದಿದೆ.

ಕಳೆದ ವರ್ಷವೂ ಇದೇ ಹುಡುಗಿ ತನ್ನ ಪ್ರೇಮಿಯ ಜೊತೆ ಹೋಗಿದ್ದು, ಇನ್ನೂ ಜನಮಾನಸದಲ್ಲೇ ಇರುವಾಗ, ಮತ್ತೆ ಮನೆ ಬಿಟ್ಟು ಹೋಗಿದ್ದ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಅನ್ ಆಫೀಸಿಯಲ್ ಆಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆಂದು ಗೊತ್ತಾಗಿದೆ. ಅಕ್ಕಪಕ್ಕದ ಜಿಲ್ಲೆಯಲ್ಲಿ ಹುಡುಕಾಟ ನಡೆಸಿದ ನಂತರ, ಗದಗ ಜಿಲ್ಲೆಯಲ್ಲಿ ಜೋಡಿಯು ಸಿಕ್ಕಿದ್ದು, ಅವರನ್ನ ನಗರದ ಪ್ರಮುಖ ಠಾಣೆಗೆ ಕರೆತರಲಾಗಿದೆ ಎಂದು ಹೇಳಲಾಗಿದೆ.
ದೊಡ್ಡವರ ಮನೆತನದ ಸಮಸ್ಯೆಯನ್ನ ಯಾರಿಗೂ ಗೊತ್ತಾಗದ ಹಾಗೇ ಮುಗಿಸುವ ಪ್ರಯತ್ನಕ್ಕೆ ಪೊಲೀಸರು ಮುಂದಾಗಿದ್ದಾರೆಂದು ಹೇಳಲಾಗುತ್ತಿದ್ದು, ಅದನ್ನ ಸ್ವತಃ ಪೊಲೀಸರೇ ಖಚಿತಪಡಿಸಬೇಕಿದೆ.