ಹುಬ್ಬಳ್ಳಿಯ ಜಯಲಕ್ಷ್ಮೀ ಕಂಪರ್ಟಲ್ಲಿ “ಟಚಿಂಗ್ ಟಚಿಂಗ್”- ಮಾಲೀಕ, ಮ್ಯಾನೇಜರ್ ಸೇರಿ ಐವರ ಬಂಧನ…!
1 min readಹುಬ್ಬಳ್ಳಿ: ವೇಶ್ಯಾವಾಟಿಕೆ ನಡೆಸುತ್ತಿರುವ ದೂರಿನ ಮೇಲೆ, ಜೆಸಿ ನಗರದ ಲಾಜ್ಡ್‌ವೊಂದರ ಮೇಲೆ ಶಹರ ಠಾಣೆ ಪೊಲೀಸರು ಗುರುವಾರ ತಡರಾತ್ರಿ ದಾಳಿ ನಡೆಸಿ ಮಾಲೀಕ, ಮ್ಯಾನೇಜರ್ ಸೇರಿ ಐವರನ್ನು ಬಂಧನ ಬಂಧನ ಮಾಡಿದ್ದಾರೆ.
ನಗರದ ಕಂಫರ್ಟ್ ಜಯಲಕ್ಷ್ಮೀ ಲಾಡ್ಜ್ ನಲ್ಲಿ ಗ್ರಾಹಕರಿಂದ ಹಣ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಶಹರ ಠಾಣೆ ಇನ್‌ಸ್ಪೆಕ್ಟರ್ ಆನಂದ ಒನಕುದ್ರೆ ನೇತೃತ್ವದ ತಂಡ ದಾಳಿ ನಡೆಸಿ ಮಾಲೀಕ, ಮ್ಯಾನೇಜರ್, ಆಟೋ ಚಾಲಕ ಹಾಗೂ ಇತರರನ್ನು ಬಂಧಿಸಿ, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.
ಲಾಡ್ಜ್ ಮಾಲೀಕನ ಜೊತೆ ಶಾಮೀಲಾಗಿ ಆಟೋ ಚಾಲಕ ಗಿರಾಕಿಗಳನ್ನ ಕರೆದುಕೊಂಡು ಬರುತ್ತಿದ್ದನೆಂದು ಗೊತ್ತಾಗಿತ್ತು. ಈ ಸಮಯದಲ್ಲಿ ಹೊಂಚು ಹಾಕಿ ಕುಳಿತಿದ್ದ ಪೊಲೀಸರು, ದಂಧೆ ನಡೆಸುವ, ನಡೆಸಲು ಮ್ಯಾನೇಜರ್ ಕಿ ಮಾಡುವ ಮತ್ತೂ ಗಿರಾಕಿಗಳನ್ನ ತಂದು ಕೊಡುವ ಆಸಾಮಿ ಸಮೇತ ಎಲ್ಲರನ್ನೂ ಹೆಡಮುರಿಗೆ ಕಟ್ಟಿದ್ದಾರೆ.
ಪ್ರಕರಣವನ್ನ ಶಹರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಪೊಲೀಸರು ಜರುಗಿಸಿದ್ದಾರೆ.