ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಮೇಲಿವೆ “14” ಕೇಸ್- ರಾಜು ಧರ್ಮದಾಸ “ಡಿಸೆಂಬರ್ 18ಬಂಧನ, ಜಾಮೀನು”- ಈ ಕೇಸಲ್ಲಿ ಐದು ಆರೋಪಿಗಳು ಸಾವಿಗೀಡಾಗಿದ್ದಾರೆ…!!!!

ಹುಬ್ಬಳ್ಳಿ: 1992 ಪ್ರಕರಣವೊಂದರಲ್ಲಿ ಹುಬ್ಬಳ್ಳಿ ಶಹರ ಠಾಣೆಯಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಶ್ರೀಕಾಂತ ಪೂಜಾರಿಯ ಮೇಲೆ ಒಟ್ಟು ಹದಿನಾಲ್ಕು ಪ್ರಕರಣಗಳಿರುವುದು ತಿಳಿದುಬಂದಿದೆ.
ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆ, ಹಳೇಹುಬ್ಬಳ್ಳಿ ಪೊಲೀಸ್ ಠಾಣೆ, ವಿದ್ಯಾನಗರ ಪೊಲೀಸ್ ಠಾಣೆ ಹಾಗೂ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಅಕ್ರಮ ಸಾರಾಯಿ, ಸ್ಪೀರಿಟ್ ಮಾರಾಟ ಪ್ರಕರಣಗಳು ದಾಖಲಾಗಿವೆ. ಶ್ರೀಕಾಂತ ಪೂಜಾರಿಯು ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸಿನಲ್ಲಿ ಬಂಧನವಾದ ನಂತರ ಜಾಮೀನು ಸಿಕ್ಕಿಲ್ಲ. ಹೀಗಾಗಿ ಜೈಲು ಪಾಲಾಗಿದ್ದಾರೆ.
ಇದೇ ಕೇಸಿನಲ್ಲಿ ಡಿಸೆಂಬರ್ 18 ರಂದು ಬಂಧನವಾಗಿದ್ದ ರಾಜು ಧರ್ಮದಾಸ್‌ಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಅವರು ಅವತ್ತೆ ಬಿಡುಗಡೆಯಾಗಿದ್ದಾರೆ. ಈ ಪ್ರಕರಣದಲ್ಲಿರುವ ಎಂಟು ಆರೋಪಿಗಳ ಪೈಕಿ ಐವರು ಸಾವನ್ನಪ್ಪಿದ್ದು, ಒಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ.