ಹುಬ್ಬಳ್ಳಿಯಲ್ಲಿ ಒಂದೇ ಮನೆತನದ ಅಜ್ಜ, ಮೊಮ್ಮಗ, ಮೊಮ್ಮಗಳ ಗೆಲುವು…!

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಗಿದ್ದು, ಒಂದೇ ಮನೆತನದ ಮೂವರು ಪಾಲಿಕೆಗೆ ಸದಸ್ಯರಾಗಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ಮಹಾನಗರ ಪಾಲಿಕೆಯ ವಾರ್ಡ ಸಂಖ್ಯೆ 52ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಚೇತನ ಹಿರೇಕೆರೂರ ಸುಮಾರು 314 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಚೇತನ ಹಿರೇಕೆರೂರ ಸಹೋದರಿ ಶೃತಿ ಚೆಲವಾದಿ ಬಿಜೆಪಿಯ ಮಹೇಂದ್ರ ಕೌತಾಳರನ್ನ ಸೋಲಿಸಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದಿದ್ದು, ಶೃತಿ ಚೆಲವಾದಿ, ಚೇತನ ಹಿರೇಕೆರೂರ ಖಾಸಾ ಸಹೋದರಿಯಾಗಿದ್ದಾಳೆ.
ಹಾಗೇಯೇ ಭಾರತೀಯ ಜನತಾ ಪಕ್ಷದಿಂದ 42ನೇ ವಾರ್ಡಿನಿಂದ ಗೆದ್ದು ಬಂದಿರುವ ಮಹದೇವಪ್ಪ ನರಗುಂದ ಗೆಲುವು ಸಾಧಿಸಿದ್ದಾರೆ. ಇವರು ಚೇತನ ಹಿರೇಕೆರೂರರ ಅಜ್ಜನಾಗಿದ್ದಾರೆ.
ಈ ಮೂವರು ವಾರ್ಡ ವಿಂಗಡನೆಯಾದ ನಂತರ ಮೊದಲ ಬಾರಿಗೆ ಪ್ರವೇಶ ಪಡೆಯುತ್ತಿದ್ದು, ಚೇತನ ಹಿರೇಕೆರೂರ ತನ್ನ ಕುಟುಂಬದ ಇನ್ನಿಬ್ಬರ ಸದಸ್ಯರೊಂದಿಗೆ ಪ್ರವೇಶ ಪಡೆದಿರುವುದು ವಿಶೇಷವಾಗಿದೆ.