28ರ ಹರೆಯದ “ನಿತಿನ್ ಇಂಡಿ” ಕಮಲದ ಕಲಿ: ಬಿರುಸಿನ ಪ್ರಚಾರಕ್ಕೆ ಸಚಿವರು ಸಾಥ್…!

ಧಾರವಾಡ: ಭಾರತೀಯ ಜನತಾ ಪಕ್ಷದ 5ನೇ ವಾರ್ಡಿನ ಅಭ್ಯರ್ಥಿಯಾಗಿರುವ ನಿತಿನ್ ಇಂಡಿ, ಕೇವಲ 28ರ ಯುವಕನಾಗಿದ್ದು, ಜನಸೇವೆಯಲ್ಲಿ ತಮ್ಮನ್ನ ತಾವು ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದಾರೆ.

ಭಾರತೀಯ ಜನತಾ ಪಕ್ಷಕ್ಕಾಗಿ ಹಗಲಿರುಳು ದುಡಿದ ಹಿನ್ನೆಲೆಯಲ್ಲಿ ಶಾಸಕ ಅಮೃತ ದೇಸಾಯಿ ಸೇರಿದಂತೆ ಹಲವರು, ನಿತಿನ್ ಇಂಡಿಯವರಿಗೆ 5ನೇ ವಾರ್ಡಿನ ಟಿಕೆಟ್ ನೀಡಿದ್ದು, ಪಕ್ಷ ಯುವಕರಿಗೆ ಸ್ಥಾನ ಮಾನ ಕೊಡಲಿದೆ ಎಂಬ ಭರವಸೆಯನ್ನ ಹೆಚ್ಚಿಸಿದೆ.
ನಿತಿನ್ ಇಂಡಿಯವರ ಪ್ರಚಾರಕ್ಕೆ ಸ್ವತಃ ಸಚಿವ ಶಂಕರ ಪಾಟೀಲಮುನೇನಕೊಪ್ಪ ಕೂಡಾ ಆಗಮಿಸಿ, ವಾರ್ಡಿನಲ್ಲಿ ಮತಯಾಚನೆ ನಡೆಸಿದರು. ಯುವಕರಿಗೆ ಪ್ರಾಧ್ಯಾನ್ಯತೆಯನ್ನ ಪಕ್ಷ ನೀಡಿದ್ದು, ಯುವಕರು ರಾಜಕಾರಣಕ್ಕೆ ಬರಲು ಅವಕಾಶ ಮಾಡಿಕೊಡಬೇಕೆಂದು ಮತದಾರರಲ್ಲಿ ಸಚಿವರು ಮನವಿ ಮಾಡಿಕೊಂಡರು.
ನಿತಿನ್ ಇಂಡಿ, ಸಣ್ಣ ವಯಸ್ಸಿನಲ್ಲಿ ಜನಮನ್ನಣೆ ಗಳಿಸಿದ್ದು, ಅದೀಗ ಚುನಾವಣೆಯಲ್ಲಿ ಸಲೀಸಾಗಿದೆ. ವಾರ್ಡಿನ ಪ್ರತಿ ಭಾಗದಲ್ಲಿ ಯುವಕರಿಗೆ ಪ್ರಾಶಸ್ತ್ಯ ಕೊಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.