ರಸ್ತೆ ಅಪಘಾತ- ವಿಷಸೇವಿಸಿ ಆತ್ಮಹತ್ಯೆ- ಟ್ರ್ಯಾಕ್ಟರ್ ವಶ: ಹುಬ್ಬಳ್ಳಿ ಧಾರವಾಡ ಕ್ರೈಂ

ಬಿಡನಾಳ ಕ್ರಾಸ್ ಬಳಿ ಕಾರು-ಟಾಟಾ ಏಸ್ ಮುಖಾಮುಖಿ ಡಿಕ್ಕಿ
ಹುಬ್ಬಳ್ಳಿ: ಸಮೀಪದ ಬಿಡನಾಳ ಕ್ರಾಸ್ ಬಳಿಯ ಪೂನಾ-ಬೆಂಗಳೂರು ರಸ್ತೆಗಂಟಿಕೊಂಡು ಟಾಟಾ ಏಸ್ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಚಾಲಕರಿಗೂ ಸಣ್ಣಪುಟ್ಟ ಗಾಯಗಳಾದ ಘಟನೆ ಸಂಭವಿಸಿದೆ.
ಲಕ್ಷೇಶ್ವರ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಬಿಡನಾಳ ಕ್ರಾಸ್ ಬಳಿ ಕ್ರಾಸ್ ಮಾಡುತ್ತಿದ್ದ ರಾಕೇಶ ಪವಾರ್ ಮಾಲಿಕತ್ವದ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ವಾಹನ ಸವಾರರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.
ಅಪಘಾತ ರಸ್ತೆ ಮಧ್ಯದಲ್ಲೇ ಸಂಭವಿಸಿದ್ದರಿಂದ ನಗರದೊಳಗೆ ಬರಲು ತೊಂದರೆ ಅನುಭವಿಸಬೇಕಾಯಿತು. ಇದರಿಂದ ತಕ್ಷಣವೇ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿದ್ದರು.
ಪ್ರಕರಣ ದಾಖಲು ಮಾಡಿಕೊಂಡು ಎರಡು ವಾಹನಗಳನ್ನ ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ದಾಖಲೆಗಳಿಲ್ಲದೇ ಟ್ರ್ಯಾಕ್ಟರ್ ಸಂಚಾರ: ವಶಕ್ಕೆ ಪಡೆದ RTO
ಹುಬ್ಬಳ್ಳಿ: ಟ್ರ್ಯಾಕ್ಟರ್ ತೆಗೆದುಕೊಂಡು ಹಲವು ವರ್ಷ ಕಳೆದರೂ ಕೂಡಾ ವಾಹನದ ನೋಂದಾವಣಿ ಮಾಡದೇ, ತನ್ನ ವೈಯಕ್ತಿಕ ಲಾಭಕ್ಕಾಗಿ ಬಳಸುತ್ತಿದ್ದ ಟ್ರ್ಯಾಕ್ಟರನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಹುಬ್ಬಳ್ಳಿಯ ಗಬ್ಬುರು ನಿವಾಸಿಯಾಗಿರುವ ಮಹಾಂತೇಶ ಎಂಬುವವರಿಗೆ ಸೇರಿದ ವಾಹನಕ್ಕೆ ಯಾವುದೇ ದಾಖಲೆಗಳಿಲ್ಲ. ಈ ಬಗ್ಗೆ ವಿಚಾರಣೆ ಮಾಡಿದಾಗ, ಟ್ರ್ಯಾಕ್ಟರನ್ನ ನೋಂದಾವಣೆ ಮಾಡಿಯೇ ಇಲ್ಲವೆಂದು ಗೊತ್ತಾಗಿದೆ.
ಸಾರಿಗೆ ಇಲಾಖೆಯ ಅಧಿಕಾರಿಗಳು ವಾಹನಗಳ ದಾಖಲಾತಿಗಳನ್ನು ಪರಿಶೀಲನೆ ಮಾಡುವಾಗ ಯಾವುದೇ ದಾಖಲೆಗಳು ಇರದೇ ಇದ್ದಾಗ ಸಾರಿಗೆ ಇಲಾಖೆಯ ಅಧಿಕಾರಿಗಳು ವಾಹನವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಧಾರವಾಡದಲ್ಲಿ ವಿಷ ಸೇವಿಸಿದ್ದ ವ್ಯಕ್ತಿ ಸಾವು
ಧಾರವಾಡ: ಕೌಟುಂಬಿಕ ಕಲಹದಿಂದ ಮಾನಸಿಕವಾಗಿ ನೊಂದ ವ್ಯಕ್ತಿಯೋರ್ವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ಜೋಶಿ ಗಲ್ಲಿಯಲ್ಲಿ ನಡೆದಿದೆ.
ಪುಂಡಲೀಕ ದುರುಗಪ್ಪ ಬಾಗಲೆ ಎಂಬ ವ್ಯಕ್ತಿಯೇ ಸಾವಿಗೀಡಾಗಿದ್ದು, ಮನೆಯಲ್ಲಿ ನೆಮ್ಮದಿ ಹಾಳಾಗಿದ್ದರಿಂದ ಬೇರೆ ದಾರಿ ಕಾಣದೇ ವಿಷಸೇವಿಸಿದ್ದನೆಂದು ಹೇಳಲಾಗಿದೆ.
ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡ ಪುಂಡಲೀಕ ಎಂಬುವವರನ್ನ ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿತ್ತು.
ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೇ ಪುಂಡಲೀಕ ಸಾವನ್ನಪ್ಪಿದ್ದು, 55 ವಯಸ್ಸಿನ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದರಿಗೆ ಶವವನ್ನ ನೀಡಿದರು. ಪ್ರಕರಣ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.