ಹುಬ್ಬಳ್ಳಿ-ಧಾರವಾಡದ ಪ್ರತಿಯೊಬ್ಬರು ನೋಡಲೇಬೇಕಾದ ಸ್ಟೋರಿಯಿದು… “ಬೈಪಾಸ್ ಟೋಲ್ ಕಂಟಿನ್ಯೂ”…

ಧಾರವಾಡ: ಇದು ಅವಳಿನಗರದ ಜನರು ವಿಚಾರಿಸಬೇಕಾದ ಮಾಹಿತಿ. ಸದ್ದಿಲ್ಲದೇ ನಡೆಯುವ ತಂತ್ರಗಳು ಹೇಗಿರುತ್ತವೆ ಎಂಬುದನ್ನ ಅರಿತುಕೊಂಡು ಮುನ್ನಡೆಯುವ ಜರೂರತ್ತು ಎಲ್ಲರಿಗೂ ಇದೆ. ಹಾಗಾಗಿಯೇ, ಈ ವರದಿಯನ್ನ ಸಂಪೂರ್ಣವಾಗಿ ಓದಿರಿ.
ಹುಬ್ಬಳ್ಳಿ-ಧಾರವಾಡ ಅವಳಿನಗರದ ಬೈಪಾಸ್ ಟೋಲ್ ಸಂಗ್ರಹದ ದಿನಾಂಕ ನಿನ್ನೆಗೆ ಮುಗಿದು ಹೋಗಿತ್ತು. ಅಚ್ಚರಿಯಾಯಿತಾ… ಆಶ್ಚರ್ಯ ಪಡಬೇಡಿ. ಹೌದು ಮುಗಿದು ಹೋಗಿತ್ತು. ಆದರೂ, ಇಂದಿನಿಂದ ಮತ್ತೆ 49 ದಿನಗಳವರೆಗೆ ಮುಂದುವರೆಸಲಾಗುತ್ತಿದೆ.
ಅವಳಿನಗರದ ಬೈಪಾಸ್‌ನಲ್ಲಿ ಪ್ರತಿದಿನವೂ 15ರಿಂದ 18 ಲಕ್ಷ ರೂಪಾಯಿ ಸಂಗ್ರಹವಾಗತ್ತೆ ಎಂದು ಹೇಳಲಾಗತ್ತೆ. ಅಂದರೇ, ಸರಿಸುಮಾರು ಎಂಟು ಕೋಟಿ ರೂಪಾಯಿ ಸಂಗ್ರಹ ಮಾಡಲಾಗತ್ತೆ.
ಇದಕ್ಕೆ ಕಾರಣವೇನು ಎಂದು ತಿಳಿದಾಗ, ಕೋವೀಡ್ ಹಾಗೂ ನೋಟ್ ರದ್ಧತಿ ಸಮಯದಲ್ಲಿ ಆಗಿರುವ ನಷ್ಟವನ್ನ ಈ 49 ದಿನಗಳ ವರೆಗೆ ಭರಿಸಲು ಸಮಯ ನೀಡಲಾಗಿದೆಯಂತೆ. ಈ ಬಗ್ಗೆ ಅಧಿಕಾರಿಯೊಬ್ಬರು ಕರ್ನಾಟಕವಾಯ್ಸ್.ಕಾಂಗೆ ಮಾಹಿತಿ ನೀಡಿದ್ದಾರೆ.
ಕಿಲ್ಲರ್ ಬೈಪಾಸ್ ಎಂದೇ ಹೆಸರು ಪಡೆದಿರುವ ಇಲ್ಲಿ “ಹಣ”ವನ್ನ ಹೆಚ್ಚುವರಿಯಾಗಿ ಪಡೆಯುವ ತಂತ್ರ ರೂಪಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಸಾರ್ವಜನಿಕರ ಬಗ್ಗೆ ಕಾಳಜಿ ವಹಿಸುವ ಸಂಘ ಸಂಸ್ಥೆಗಳು ಅದೇನು ಮಾಡುತ್ತಿವೆಯೋ…!?