ತೊಯ್ದು ತಿಪ್ಪೆಯಾದ ಹುಬ್ಬಳ್ಳಿ-ಧಾರವಾಡ: ರಾಜಕಾರಣಿಗಳೇ ಇದು ನೀವು ನಿರ್ಮಿಸುತ್ತಿರೋ ಅವಳಿನಗರ… ಇದಾ ನಿಮ್ಮ ಸ್ಮಾರ್ಟ್ ಸಿಟಿ..!
1 min readಧಾರವಾಡ: ದಿನಬೆಳಗಾದರೇ ಹುಬ್ಬಳ್ಳಿಯನ್ನ ದಿಲ್ಲಿ ಮಾಡ್ತೇನಿ, ಧಾರವಾಡನ್ನ ಸಿಂಗಾಪುರ ಮಾಡ್ತೇನಿ ಎಂದು ಹೇಳಿಕೊಳ್ಳುವ ರಾಜಕಾರಣಿಗಳೇ ನೀವೂ ಇಂದಿನ ಅವಳಿನಗರದ ಸ್ಥಿತಿಯನ್ನ ಒಮ್ಮೆ ನೋಡಿಬಿಡಿ. ಬಹುಶಃ, ನಿಮ್ಮನ್ನ ಯಾರೂ ಕ್ಷಮಿಸಲಾರರು, ಅಷ್ಟೊಂದು ಗಬ್ಬೇದ್ದು ಹೋಗಿದೆ ಮಹಾನಗರಗಳು.
ಹುಬ್ಬಳ್ಳಿ-ಧಾರವಾಡ ಮಳೆಯ ದೃಶ್ಯಗಳು
ಅಕಾಲಿಕವಾಗಿ ಸುರಿದ ಮಳೆಯಿಂದ ಬಿಆರ್ ಟಿಎಸ್ ಬಸ್ ನಿಲ್ದಾಣಗಳು ಸೇರಿದಂತೆ ಗುಡಿ-ಗುಂಡಾರಗಳು ನೀರಿನಲ್ಲಿ ಮುಳುಗಿ ಹೋಗುತ್ತಿವೆ. ನೀವು ಕನಸು ಕಂಡಿದ್ದ ಬಿಆರ್ ಟಿಎಸ್ ಮಾರ್ಗದಿಂದಲೇ ಹಲವು ಕಡೆ ನೀರು ಹರಿಯಲಾಗದೇ ಸಮಸ್ಯೆಯನ್ನ ಹೆಚ್ಚು ಮಾಡಿವೆ.
ವಾಹನಗಳು ಸಂಚಾರ ನಡೆಸಲು ಆಗುತ್ತಿಲ್ಲ. ಬೈಕಿನಲ್ಲಿ ನೀರು ತುಂಬುತ್ತಿವೆ. ವಾಹನಗಳು ಮುಂದೆ ಸಾಗಲಾರದೇ ಸಂಚಾರವನ್ನ ಅಸ್ತವ್ಯಸ್ತಗೊಳಿಸುತ್ತಿವೆ. ಇದಾ ನೀವೂ ಕನಸು ಕಂಡ ಸ್ಮಾರ್ಟ್ ಸಿಟಿ ಎಂದು ಜನರು ಹುಬ್ಬೇರಿಸುವಂತಹ ದೃಶ್ಯಗಳು ಇಂದು ಎಲ್ಲೆಂದರಲ್ಲಿ ಕಂಡು ಬಂದವು.
ಮಹಾರಾಷ್ಟ್ರದ ಬಾಂಬೆಯೋ ಕರ್ನಾಟಕದ ಬೆಂಗಳೂರಲ್ಲೋ ಕಂಡ ದೃಶ್ಯಗಳನ್ನ ನೋಡಿದ ಅನುಭವ ಎಲ್ಲರಿಗೂ ಆಗಿದೆ. ಅವಳಿನಗರದ ರಾಜಕಾರಣಿಗಳು ನೀವೂ ಮಾಡಲು ಹೊರಟಿರುವುದು ಯಾವ ಸಿಟಿಯನ್ನ ಎಂಬುದನ್ನ ಮನದಟ್ಟು ಮಾಡಿಕೊಳ್ಳಿ. ಇಷ್ಟೇ ಮಳೆಗೆ ಮಹಾನಗರ ತಿಪ್ಪೆಯಾಗುತ್ತಿದೆ. ಮುಂದಿನ ಮಳೆಗಳಿಗೆ ಮುಳುಗೇಳುವುದರಲ್ಲಿ ಯಾವುದೇ ಸಂಶಯವಿಲ್ಲ.