ಹುಬ್ಬಳ್ಳಿ-ಧಾರವಾಡದ ಪ್ರತಿಯೊಬ್ಬರು ನೋಡಲೇಬೇಕಾದ “ಕಮೀಷನರ್” ಮೊದಲ ಮಾತು…!!!

ಹುಬ್ಬಳ್ಳಿ: ಅವಳಿನಗರದ ಯಾವುದೇ ಪ್ರದೇಶಗಳಲ್ಲಿ ಅನ್ಯಾಯ ನಡೆದರೇ ಅದನ್ನ ಮಹಿಳೆಯರು ಸೇರಿದಂತೆ ಎಲ್ಲರೂ ವಿರೋಧಿಸಬೇಕು. ಈ ಮೂಲಕ ನ್ಯಾಯದ ಪರವಾಗಿರಬೇಕೆಂಬ ಭಾವನೆ ಸಾರ್ವಜನಿಕರಲ್ಲೂ ಮೂಡಬೇಕೆಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ ಮನವಿ ಮಾಡಿದ್ದಾರೆ.
ಮೊದಲು ಅವರ ಮಾತು ಕೇಳಿ ಬಿಡಿ…
ಅವಳಿನಗರದ ಪ್ರತಿಯೊಂದು ಪೊಲೀಸರು ಮಹಿಳೆಯರ ರಕ್ಷಣೆಗೆ ಮೊದಲ ಆಧ್ಯತೆ ನೀಡುತ್ತದೆ. ಇದರ ಜೊತೆಗೆ ಅನ್ಯಾಯವಾದಾಗ ಮಹಿಳೆಯರು ಧ್ವನಿಯೆತ್ತಬೇಕು ಎಂದರು.
ಬೇರೆ ಯಾರಿಗೋ ತೊಂದರೆಯಾಗುತ್ತಿದೆ ಎಂದುಕೊಂಡು ನಡೆದರೇ ಸಮಾಜಕ್ಕೆ ಒಳ್ಳೆಯದಲ್ಲ. ಅನ್ಯಾಯದ ವಿರುದ್ಧ ತಕ್ಷಣವೇ ನಿಲ್ಲಬೇಕೆಂದು ಕರೆ ನೀಡುವ ಮೂಲಕ, ಪೊಲೀಸರೊಂದಿಗೆ ಜನರು ನಿಲ್ಲಬೇಕೆಂದು ಹೇಳಿದರು.