ಈ ಬಾರಿ ಪಾಲಿಕೆಯ ಮೇಯರ್ ಸ್ಥಾನ ಧಾರವಾಡಕ್ಕೆ: ವೀರೇಶ ಅಂಚಟಗೇರಿ ಫೆವರೇಟ್…!

ಧಾರವಾಡ: ಕ್ಷೇತ್ರಗಳ ವಿಂಗಡನೆಯಾದ ನಂತರ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರವನ್ನ ಹಿಡಿಯುವುದರಲ್ಲಿ ಅನುಮಾನಗಳು ಉಳಿದಿಲ್ಲವಾದ್ದರಿಂದ, ಮೇಯರ್ ಯಾರು ಆಗ್ತಾರೆಂಬ ಚರ್ಚೆಗಳು ಆರಂಭಗೊಂಡಿವೆ.

ಮೇಯರ್ ಸ್ಥಾನವೂ ಹಿಂದುಳಿದ ವರ್ಗ ಎ ಗೆ ಮೀಸಲು ಇರುವುದರಿಂದ ಮತ್ತು ಧಾರವಾಡಕ್ಕೆ ಮೇಯರ್ ಸ್ಥಾನ ಕೊಡಬೇಕೆಂಬ ಕೂಗು ಆಗಾಗ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ 3ನೇ ವಾರ್ಡಿನಿಂದ ಜಯಭೇರಿ ಬಾರಿಸಿರುವ ವೀರೇಶ ಅಂಚಟಗೇರಿಯವರೇ ಮುಂದಿನ ಮೇಯರ್ ಆಗುತ್ತಾರೆಂಬ ಮಾತುಗಳು ಕೇಳಿಬರಲಾರಂಭಿಸಿವೆ.
ಹುಬ್ಬಳ್ಳಿಯಲ್ಲಿ ಮಾಜಿ ಮೇಯರ್ ಪತಿ ಹಾಗೂ ಈ ಮೊದಲು ಪಾಲಿಕೆ ಸದಸ್ಯರಾಗಿದ್ದ ತಿಪ್ಪಣ್ಣ ಮಜ್ಜಗಿ ಹಾಗೂ ರಾಮಣ್ಣ ಬಡಿಗೇರ ಹೆಸರುಗಳು ಕೇಳಿ ಬರುತ್ತಿವೆ. ಆದರೆ, ಹುಬ್ಬಳ್ಳಿಗೆ ಕೊಡುತ್ತಾರಾ ಎಂಬ ಪ್ರಶ್ನೆ ಹಾಗೇಯೇ ಉಳಿಯುತ್ತದೆ.
ವೀರೇಶ ಅಂಚಟಗೇರಿ ಅವರು ಶಾಸಕ ಅಮೃತ ದೇಸಾಯಿ ಹಾಗೂ ಸಂಸದ ಪ್ರಲ್ಹಾದ ಜೋಶಿಯವರು ನಿಕಟವರ್ತಿಯಾಗಿರುವುದು ಒಳ್ಳೆಯ ಫಲಿತಾಂಶ ಬರಬಹುದೆಂಬ ನಿರೀಕ್ಷೆಯಿದೆ.