ಹು-ಧಾ ಪಾಲಿಕೆ ಮೇಯರ್: ಬೆಂಗಳೂರಲ್ಲಿ “ಕೈ ಪಡೆ” ತಂತ್ರ- ರೆಸಾರ್ಟ್‌ಲ್ಲಿ ಬರಬೇಕಾದವರು…!!!
1 min readಬೆಂಗಳೂರು: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಇನ್ನೆರಡು ದಿನಗಳು ಬಾಕಿ ಇರುವಾಗಲೇ ಬಿರುಸಿನ ರಾಜಕೀಯ ಚಲನವಲಗಳು ಆರಂಭಗೊಂಡಿವೆ.
ಜೂನ್ 20 ಕ್ಕೆ ಮೇಯರ್ ಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಸದಸ್ಯರನ್ನ ಹೈಜಾಕ ಮಾಡಬಹುದೆಂಬ ಕಾರಣಕ್ಕೆ ರೆಸಾರ್ಟ್‌ಗೆ ಕಳಿಸಲಾಗಿದ್ದು, ಹಲವರು ಇನ್ನೂ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದೆ.
ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಹಾಗೂ ಹಿರಿಯ ನಾಯಕ ಜಗದೀಶ ಶೆಟ್ಟರ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಮಯದಲ್ಲಿ ಶಾಸಕರುಗಳಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಅನಿಲಕುಮಾರ ಪಾಟೀಲ, ಇಸ್ಮಾಯಿಲ ತಮಾಟಗಾರ ಕೂಡಾ ಉಪಸ್ಥಿತರಿದ್ದರು.
ಹೇಗಾದರೂ ಮಾಡಿ ಮಹಾನಗರ ಪಾಲಿಕೆಯ ಅಧಿಕಾರವನ್ನ ಪಡೆಯಬೇಕೆಂಬ ಕಾರ್ಯತಂತ್ರವನ್ನ ಕಾಂಗ್ರೆಸ್ ಚುನಾವಣೆಯ ದಿನದ ವರೆಗೂ ರೂಪಿಸಿದ್ದು, ಅದಕ್ಕೆ ಪೂರಕವಾದ ಸಂಪರ್ಕವನ್ನ ಸಾಧಿಸಲಾಗುತ್ತಿದೆ.