ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಚುನಾವಣೆ “ಜೂನ್ 30ಕ್ಕೆ” ಫಿಕ್ಸ್…. ಈ ಬಾರಿ ಮಹಿಳೆಗೆ ಪ್ರಾಧಾನ್ಯತೆ…

ಹುಬ್ಬಳ್ಳಿ: ಮಹಾನಗರ ಪಾಲಿಕೆಯ 24ನೇ ಅವಧಿಗಾಗಿ ಮೇಯರ್ ಚುನಾವಣೆ ಜೂನ್ ಮೂವತ್ತರಂದು ನಡೆಯಲಿದ್ದು, ಈ ಬಾರಿ ಮಹಿಳಾ ಕಾರ್ಪೋರೇಟರ್ ಮೇಯರ್ ಆಗಲಿದ್ದಾರೆ.
ಮೇಯರ್ ಸಾಮಾನ್ಯ ಮಹಿಳೆ ಮೀಸಲಾತಿಯಿದ್ದು, ಉಪಮೇಯರ್‌ಗೆ ಹಿಂದುಳಿದ ವರ್ಗ ಬಿ ಮೀಸಲಾತಿಯಿದೆ. ಈ ಕುರಿತು ಪ್ರಾದೇಶಿಕ ಆಯುಕ್ತರು ಕಾರ್ಯಸೂಚಿ ಹೊರಡಿಸಿದ್ದಾರೆ.