ಹುಬ್ಬಳ್ಳಿ-ಧಾರವಾಡದಲ್ಲಿ ಪೈನ್ ಮಷೀನ್, 100ಮೊಬೈಲ್, ಸಿಸಿ- ನೈಟ್ ವಿಷನ್ ಕ್ಯಾಮರಾ ಬಂದ್…!
1 min readಹುಬ್ಬಳ್ಳಿ: ಧಾರವಾಡ-ಹುಬ್ಬಳ್ಳಿ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿನ ಪೊಲೀಸ್ ಕಣ್ಗಾವಲಿಗೆ ಕಾರಣವಾಗುವ ಹಲವು ಯಂತ್ರಗಳು ಹಣ ತುಂಬದೇ ಇರುವುದಕ್ಕೆ ಬಂದ್ ಆಗಿರುವುದು ಬೆಳಕಿಗೆ ಬಂದಿದೆ.
ಹೌದು.. ಕಮೀಷನರ್ ವ್ಯಾಪ್ತಿಯಲ್ಲಿ 5 Automatic camera, 35 night vision camera, 34 CC camera, 74 fine machine, 100 mobileಗಳು ಕಾರ್ಯವನ್ನ ಮಾಡದೇ ಸುಮ್ಮನೆ ಮಲಗಿವೆ. ಇದಕ್ಕೆ ಕಾರಣವಾಗಿದ್ದು, ಇಲಾಖೆಯಿಂದ ಹಣ ನೀಡಿಲ್ಲ ಎಂಬುದು.
ಅಸಲಿಗೆ ಹಣ ನೀಡದೇ ಇರುವುದಕ್ಕೆ ಕಾರಣವೇನು ದೊಡ್ಡದ್ದಲ್ಲ. ಆದರೆ, ಈ ಯಂತ್ರಗಳನ್ನ ಮೊದಲು ಖರೀದಿಸುವಾಗ ಹೆಚ್ಚುವರಿ ಹಣವನ್ನ ನೀಡಿದ್ದಾರೆಂದು ಹೇಳಲಾಗುತ್ತಿದ್ದು, ಅದೇ ಕಾರಣಕ್ಕೆ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಅದೇಲ್ಲವನ್ನೂ ಪರಿಶೀಲನೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಕಡಿಮೆ ಬಜೆಟ್ ಇದ್ದರೂ ಹೆಚ್ಚು ಹಣವನ್ನ ನೀಡಿ ಖರೀದಿ ಮಾಡಿದ್ದಾರೆಂಬ ಸಂಶಯ ವ್ಯಕ್ತವಾಗಿದ್ದು, ಇದರ ಹಿಂದಿರುವವರು ಯಾರೂ ಎಂಬುದರ ಬಗ್ಗೆಯೂ ಸೂಕ್ತ ತನಿಖೆ ಆರಂಭಗೊಂಡಿದೆ ಎಂದು ಹೇಳಲಾಗಿದೆ.