ಹುಬ್ಬಳ್ಳಿ-ಧಾರವಾಡ ಬೈಪಾಸ್‌ನಲ್ಲಿ ಬೈಕ್ ಸವಾರರು “ಸಾವಿಗಿಡ್ತಾರೆ”- Exclusive Videos

ಧಾರವಾಡ: ಹುಬ್ಬಳ್ಳಿಯಿಂದ ನರೇಂದ್ರ ಕ್ರಾಸ್‌ವರೆಗಿನ ಬೈಪಾಸ್ ನೂರಾರೂ ಜೀವಗಳನ್ನ ಅಪಘಾತದ ಮೂಲಕ ಬಲಿ ಪಡೆದಿರುವುದು ಬಹುತೇಕರಿಗೆ ಗೊತ್ತೆಯಿದೆ. ಆದರೂ, ನಿಜ ಕಾರಣಗಳನ್ನ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇದೀಗ ಅಪಘಾತಗಳಿಗೆ ಕಾರಣವಾಗುವ ಸಾಕ್ಷ್ಯವೊಂದು ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.
ಮೊದಲು ಈ ಒಂದು ನಿಮಿಷದ ವೀಡಿಯೋವನ್ನ ಒಂದ್ಸಲ ಪೂರ್ಣವಾಗಿ ನೋಡಿ…
ಬೈಪಾಸ್‌ನಲ್ಲಿ ಸಂಚರಿಸುವ ಟಿಪ್ಪರ್‌ಗಳಿಗೆ ಯಾವುದೇ ಕಡಿವಾಣ ಇಲ್ಲವಾಗಿದೆ. ನಿಯಮ ಉಲ್ಲಂಘನೆ ಮಾಡಿ, ಹೆಚ್ಚುವರಿ ಸರಕನ್ನ ಹೇರಿಕೊಂಡು ಹೋಗುವುದಲ್ಲದೇ, ರಸ್ತೆಯುದ್ದಕ್ಕೂ ಅವುಗಳು ಕೆಳಗೆ ಬಿದ್ದರೂ ಹೊರಳಿ ನೋಡುವವರಿಲ್ಲ.
ಟಿಪ್ಪರ್‌ಗಳು ಕಡಿಯನ್ನ ಸಾಗಾಟ ಮಾಡುವಾಗ ರಸ್ತೆಯುದ್ದಕ್ಕೂ ಕಡಿಯು ಬೀಳತ್ತೆ. ಆಗ ಅದೇ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು, ಸ್ಕೀಡ್ ಆಗಿ ಬಿದ್ದು ಪ್ರಾಣವನ್ನ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.
ಇಂತಹ ರಕ್ಕಸ ಮನಸ್ಥಿತಿಯ ಚಾಲಕರಿಗೆ ಹಾಗೂ ಮಾಲೀಕರಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಬೇಕಿದೆ.