ಹುಬ್ಬಳ್ಳಿ ಕ್ರೈಂ: ಆತ್ಮಹತ್ಯೆ ಯತ್ನ, ಬೈಕ್ ಅಪಘಾತ

ಹುಬ್ಬಳ್ಳಿ: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವರೂರು ಬಳಿಯ ಕಾಮತ ಹೋಟೆಲ್ ಬಳಿ ಸಂಭವಿಸಿದೆ.
ಗಣೇಶ ದ್ಯಾಮಣ್ಣ ಲಮಾಣಿ ಎಂಬುವರಿಗೆ ಸೇರಿದ ಕಾರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದೆ. ಬೈಕ್ ನಿಂದ ಗಾಯಗೊಂಡ ಸವಾರ ಮಹಾಂತೇಶನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಗೆ ಯತ್ನ
ಹುಬ್ಬಳ್ಳಿ: ಕಳೆದ ಎರಡು ದಿನಗಳೊಂದಿಗೆ ಮಾತನಾಡದೇ ಒಬ್ಬನೇ ಇರುತ್ತಿದ್ದ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದ್ದು, ಘಟನೆಯಿಂದ ಮನೆಯ ನೆಮ್ಮದಿಯೇ ಹಾಳಾಗಿ ಹೋಗಿದೆ.
ಸಂಗಮೇಶ ಎಂಬಾತನೇ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯಾಗಿದ್ದು, ಜನೇವರಿ ಒಂದರಿಂದ ಯಾರೊಂದಿಗೂ ಮಾತನಾಡದೇ ಸುಮ್ಮನೆ ಇರತೊಡಗಿದ್ದ. ಯಾವುದೇ ದುಶ್ಚಟಗಳು ಇಲ್ಲದೇ ಇರುವುದರಿಂದ ಮನೆಯವರು ಇದನ್ನ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಏಕಾಏಕಿ ವಿಷ ಸೇವನೆ ಮಾಡಿ, ಮನೆಯಲ್ಲಿ ಬಿದ್ದಿದ್ದರಿಂದ ತಕ್ಷಣವೇ ಆತನನ್ನ ಆಸ್ಪತ್ರೆಗೆ ಕರೆತರಲಾಗಿತ್ತು.
ಚಿಕಿತ್ಸೆ ನೀಡುತ್ತಿದ್ದ ವೈಧ್ಯರು 24 ಗಂಟೆಯ ಸಮಯ ನೀಡಿದ್ದರು. ಅದೇ ವೇಳೆಯಲ್ಲಿ ಚಿಕಿತ್ಸೆಯಿಂದ ಸಂಗಮೇಶನ ಆರೋಗ್ಯ ಸುಧಾರಣೆಯಾಗುತ್ತಿದೆ.