ದೀಪದ ಕೆಳಗೆ ಕತ್ತಲು: ಡೀಲ್ ನ ಸ್ಪೋಟಕ ಮೊದಲ ಆಡೀಯೋ ಹಿಂಗಿದೆ ಕೇಳಿ…!
1 min readಹುಬ್ಬಳ್ಳಿ: ಅವಳಿನಗರದಲ್ಲಿನ ಪೊಲೀಸ್ ವ್ಯವಸ್ಥೆ ಹೆಂಗಿದೆ ಎಂಬುದನ್ನ ತಮಗೆ ತೋರಿಸಲು ಕರ್ನಾಟಕವಾಯ್ಸ್.ಕಾಂ ಬೆನ್ನು ಹತ್ತಿದ ಸ್ಟೋರಿಗೆ ಹಲವು ಸಾಕ್ಷ್ಯಗಳು ಲಭಿಸಿದ್ದು, ಪೊಲೀಸ್ ಕಮೀಷನರ್ ಕಚೇರಿಯ ಕೂಗಳತೆ ದೂರದಲ್ಲಿರೋ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಬಹುದೊಡ್ಡ ಹಗರಣವೊಂದು ನಡೆದಿದ್ದು, ಹಲವು ಪೊಲೀಸರು, ಇನ್ಸಪೆಕ್ಟರ್ ಸೇರಿದಂತೆ ಬೇರೆ ಠಾಣೆಯ ಪೊಲೀಸರು ಭಾಗವಹಿಸಿರುವ ಸಾಕ್ಷ್ಯಗಳು ಕರ್ನಾಟಕವಾಯ್ಸ್ ಗೆ ಲಭಿಸಿವೆ.
ಅದರ ಮೊದಲ ಆಡೀಯೋ ಇಲ್ಲಿದೆ ಕೇಳಿ..
ಕಳೆದ ರಾತ್ರಿ ಕರ್ನಾಟಕವಾಯ್ಸ್.ಕಾಂ “ಹುಬ್ಬಳ್ಳಿ ಪೊಲೀಸ್ ಠಾಣೆಗಳಲ್ಲಿ ಡೀಲ್: ಆರೋಪಿಗಳನ್ನ ಹಿಡಿದು ಬಿಟ್ಟಿದ್ಯಾರು- ಸ್ಪೋಟಕ ಮಾಹಿತಿ…!” ಹೆಡ್ಡಿಂಗ್ ನಲ್ಲಿ ಸ್ಟೋರಿಯನ್ನ ಹಾಕಿದ್ದೆ ತಡ. ಡೀಲಿಂಗ್ ಕುದುರಿಸಿದ ಗಿರಾಕಿಗಳು ಕೂತಲ್ಲಿ ಕೂಡದೇ ನಿಂತಲ್ಲಿ ನಿಲ್ಲದೇ ವಿಲವಿಲ ಒದ್ದಾಡುತ್ತಿದ್ದಾರೆ. ತಾವೂ ಮಾಡಿದ್ದು ಘನಂದಾರಿ ಕೆಲಸವೆಂಬಂತೆ “ನಾನು ಸಾಚಾ, ಆಕೆ ಸಾಚಾ, ಈತ ಸಾಚಾ” ಎಂದು ಕಂಡ ಕಂಡವರ ಮುಂದೆ ತೋರಿಸಿಕೊಳ್ಳುವ ಪ್ರಯತ್ನವನ್ನ ಮಾಡುತ್ತಿದ್ದಾರೆ. ಈ ಸ್ಯಾಂಪಲ್ ಆಡೀಯೋ ಕೇಳಿದರೇ, ಯಾರೂ ಎಷ್ಟು ಸಾಚಾ ಎಂಬುದರ ಸಣ್ಣ ಸಾಕ್ಷ್ಯ ಸಿಗತ್ತೆ. ಇನ್ನುಳಿದದ್ದು ಇಂದು 09 ಗಂಟೆಗೆ ವೀಡಿಯೋ ಸಮೇತ, ಹುಬ್ಬಳ್ಳಿ ಧಾರವಾಡ ಪೊಲೀಸ್ ಇತಿಹಾಸದಲ್ಲೇ ಲಜ್ಜೆಗಟ್ಟು ನಡೆದ ಸ್ಟೋರಿಯ ಪೂರ್ಣ ವಿವರವನ್ನ ನಿಮ್ಮ ನೆಚ್ಚಿನ ಕರ್ನಾಟಕವಾಯ್ಸ್.ಕಾಂ ಹೊರಗೆ ಹಾಕಲಿದೆ. ಇನ್ನುಳಿದಂತೆ ಮಾಡಿರೋ ದಂಧೆಯನ್ನ ಮುಚ್ಚಿಕೊಳ್ಳಲು ಅವರಿವರ ಕಾಲು ಹಿಡಿಯುವ ಬದಲು ದಕ್ಷ ಅಧಿಕಾರಿಯಾದ ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಮುಂದೆ ಎಲ್ಲವನ್ನೂ ಹೇಳಿಕೊಂಡು, ಇಲಾಖೆ ಗೌರವವನ್ನ ಉಳಿಸಿಕೊಳ್ಳಬಹುದೇನೋ…!?