ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಮಿಸಾಯಿಲ್: ಬಂದೂಕು ಹಿಡಿದು ಕೆಳಗಿಳಿದ ಸೈನಿಕ- ಹುಬ್ಬಳ್ಳಿ ಎಕ್ಸಕ್ಲೂಸಿವ್

ಹುಬ್ಬಳ್ಳಿ: ನಗರದ ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ವೈಧ್ಯರ ಕಾರು ಹಾಗೂ ಮಿಲ್ಟ್ರಿ ವಾಹನದ ನಡುವೆ ಅಪಘಾತ ಸಂಭವಿಸಿ 1 ಗಂಟೆಯ ತನಕ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಪರಸ್ಪರ ವಾಗ್ವಾದ ನಡೆದ ಘಟನೆ ಸಂಭವಿಸಿದೆ.
ಜೋಧಪುರದಿಂದ ಕಾರವಾರಕ್ಕೆ ಸೇನೆಗೆ ಸಂಬಂಧಿಸಿದ ಮಿಸಾಯಿಲ್ ಒಯ್ಯುತ್ತಿದ್ದ ಲಾರಿಯೊಂದು ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಅಪಘಾತವಾಗಿತ್ತು. ಚೆನ್ನಮ್ಮ ಸರ್ಕಲ್ ಬಳಿಯಿಂದ ಧಾರವಾಡಕ್ಕೆ ಹೋಗುವ ಮಾರ್ಗದಲ್ಲಿ ಲಾರಿ ಹೊರಳುವ ಸಂದರ್ಭದಲ್ಲಿ ವೈದ್ಯರಿಗೆ ಸೇರಿದ ವಾಹನಕ್ಕೆ ಲಾರಿಯ ಹಿಂಬದಿಯ ಚಕ್ರ ತಿಕ್ಕಿದ ಪರಿಣಾಮ ಕಾರಿನ ಮುಂದಿನ ಬಂಪರ್ ಕಿತ್ತು ಬಂದಿತ್ತು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಎರಡು ವಾಹನಗಳನ್ನು ಬದಿಗೆ ಸರಿಸಿ, ಬೇರೆ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಆದ್ರೆ, ವೈದ್ಯರು ತಮ್ಮ ಗಾಡಿಗೆ ಆದ ಡ್ಯಾಮೇಜ್ ಅನ್ನು ಸರಿ ಮಾಡಿಕೊಡುವಂತೆ ಸೇನೆ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯವರಿಗೆ ಮಾಡಿಸಿ ಕೊಡಿ ಇಲ್ಲವಾದರೆ ಕೇಸ್ ಮಾಡಿ ಎಂದು ಹೇಳುತ್ತಿದ್ದರು.
ಒಂದು ಘಂಟೆಗಳ ಕಾಲ ವೈದ್ಯರು ಹಾಗೂ ಸೇನೆಯ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯ ಕಡೆಯವರು, ಸೈನಿಕರ ಜೊತೆಯಲ್ಲಿ ವೈದ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಸೈನಿಕನೊಬ್ಬ ಕೈಯಲ್ಲಿ ಬಂದೂಕು ಹಿಡಿದು ಬಂದ ಪರಿಣಾಮ ಸಾರ್ವಜನಿಕರು ಕೂಡಾ ಏನೋ ಆಗುತ್ತಿದೆ ಎಂದು ಗುಂಪು ಕೂಡಾ ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಸೇರಿತ್ತು.
ಜನ ಸೇರುತ್ತಿದ್ದ ಹಾಗೆ ಟ್ರಾಫಿಕ್ ಪೊಲೀಸರು ಜನರಿಗೆ ಬೈದು ಕಳುಹಿಸಿ ಇಬ್ಬರ ಮನವೊಲಿಸಿ ಮೊದಲು ಸೇನೆಯ ಸಾಮಗ್ರಿ ಮುಟ್ಟಲಿ ಆಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೋ ಆ ರೀತಿಯಲ್ಲಿ ಮಾಡೋಣ ಎಂದು ಲಾರಿಯ ದಾಖಲೆಗಳನ್ನು ಪಡೆದು ಲಾರಿಯನ್ನು ಕಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.