ಹುಬ್ಬಳ್ಳಿ ಬಳಿ ಬೈಪಾಸ್ ಕಾಮಗಾರಿ ಬಂದ್ ಮಾಡಿಸಿದ ರೈತರು..!
ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಬೈಪಾಸ್ ಅವೈಜ್ಞಾನಿಕವಾಗಿದ್ದು, ರೈತರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೈಪಾಸ್ ಕಾಮಗಾರಿಯನ್ನ ಸ್ಥಗಿತಗೊಳಿಸಿದ್ದಾರೆ.
ಬಿಡನಾಳ, ಗಬ್ಬೂರ ಸೇರಿದಂತೆ ಹಲವು ರೈತರಿಗೆ ಜಮೀನಿಗೆ ಹೋಗಲು ಅಂಡರ್ ಪಾಸ್ ಇಲ್ಲದೇ ರಸ್ತೆಯನ್ನ ನಿರ್ಮಾಣ ಮಾಡಲಾಗಿದೆ. ಬೈಪಾಸ್ ನಲ್ಲಿ ವೇಗವಾಗಿ ವಾಹನಗಳು ಬರುತ್ತಿರುತ್ತವೆ, ಅಲ್ಲಿ ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ರೈತರು, ತಕ್ಷಣವೇ ಕೆಎನ್ಆರ್ ಸಂಸ್ಥೆ ನಡೆಸುತ್ತಿದ್ದ ಕಾಮಗಾರಿಯನ್ನ ಬಂದ್ ಮಾಡಿಸಿದ್ದಾರೆ.
ರಸ್ತೆ ನಿರ್ಮಾಣದ ಜೊತೆಗೆ ಬೈಪಾಸ್ ಸೇತುವೆ ನಿರ್ಮಾಣ ಮಾಡುವಾಗ ಯಾವುದೇ ವಿಚಾರ ಮಾಡದೇ ನಿರ್ಮಾಣ ಮಾಡಿದ್ದರ ಪರಿಣಾಮ ರೈತ ಕುಟುಂಬಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲವೆಂದು ರೈತರು ದೂರಿದರು.
ರೈತರ ಬೇಡಿಕೆಗಳಿಗೆ ಸ್ಪಂದನೆ ಮಾಡದೇ ಇದ್ದರೇ ಜಿಲ್ಲಾಧಿಕಾರಿಗಳಿಗೆ ಕಚೇರಿ ಎದುರು ಪ್ರತಿಭಟನೆ ಮಾಡಲು ರೈತರು ಮುಂದಾಗಿದ್ದಾರೆ. ಇಂದಿನ ಹೋರಾಟದಲ್ಲಿ ರೈತ ಸಂಘದ ಪರುತಪ್ಪ ಬಳಗನವರ, ಕಾಂಗ್ರೆಸ್ ಮುಖಂಡ ಮೋಹನ ಅಸುಂಡಿ, ಫಕ್ಕೀರಪ್ಪ ಕಲ್ಲಣ್ಣನವರ, ಸಿ.ಬಿ.ಅಸುಂಡಿ, ಪ್ರಭು ಅಂಚಟಗೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.