ಹುಬ್ಬಳ್ಳಿಯ ಎಪಿಎಂಸಿ ಪೈಪ್ ಬಿದ್ದು “ಎಲ್ ಆ್ಯಂಡ್ ಟಿ ಸೂಪರ್ ವೈಸರ್” ದುರ್ಮರಣ…

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ನೀರು ಪೂರೈಕೆ ಕಾಮಗಾರಿಗೆ ಬಳಕೆಯಾಗುವ ಪೈಪ್ ಲೈನ್ ಜೋಡಿಸಲು ಮುಂದಾದ ಸಮಯದಲ್ಲಿ ಸೂಪರ್ ವೈಸರ್ ಮೇಲೆ ಪೈಪೊಂದು ಬಿದ್ದು, ಸಾವಿಗೀಡಾದ ಘಟನೆ ನಡೆದಿದೆ.

ಹುಬ್ಬಳ್ಳಿಯಲ್ಲಿ ನೀರು ಪೂರೈಕೆ ಕಾಮಗಾರಿ ಆರಂಭವಾಗುತ್ತಿರುವುದರಿಂದ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಪೈಪ್ ಗಳನ್ನ ಕ್ರೋಡಿಕರಿಸಲಾಗುತ್ತಿದೆ. ಈ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹುಬ್ಬಳ್ಳಿ ವಿಜಯನಗರದ ನಿವಾಸಿ ವಿಜಯಾನಂದ ಹದ್ದಣ್ಣನವರ ಮೇಲೆ ಪೈಪ್ ಬಿದ್ದಿದೆ.
ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನ ಕಿಮ್ಸಗೆ ರವಾನೆ ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಸೂಪರ್ ವೈಸರ್ ಸಾವಿಗೀಡಾಗಿದ್ದಾರೆ. ಪ್ರಕರಣದ ಬಗ್ಗೆ ಎಪಿಎಂಸಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.