ವಿದ್ಯಾನಗರ ಠಾಣೆ ಘಟನೆ: ಅಸಲಿ ಸತ್ಯ ಬಿಚ್ಚಿಟ್ಟ “ಹಿಂದೂ ನಾಯಕ ಜಯತೀರ್ಥ ಕಟ್ಟಿ”…
1 min readಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಷ್ಟಿತ ಕಿಮ್ಸ್ ವಸತಿ ಗೃಹದಲ್ಲಿ ನಡೆದ ಕಳ್ಳತನದ ಪ್ರಕರಣಗಳಲ್ಲಿ ಆರೋಪಿಗಳನ್ನ ಹಿಡಿಯುವುದರಲ್ಲಿ ವಿದ್ಯಾನಗರ ಠಾಣೆ ಪೊಲೀಸರು ತಾರತಮ್ಯ ಮಾಡಿರುವುದೇ ಗೊಂದಲಕ್ಕೆ ನಿಜವಾದ ಕಾರಣವೆಂದು ಗೊತ್ತಾಗಿದೆ.
ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಹಿಂದೂ ನಾಯಕ ಜಯತೀರ್ಥ ಕಟ್ಟಿಯವರು ಹೇಳಿದ್ದಾರೆ.
ಕಿಮ್ಸ್ ಆವರಣದಲ್ಲಿ ಇರುವ ವಸತಿ ಗೃಹದಲ್ಲಿ ಕಳ್ಳತನ ನಡೆದರೇ ಆರೋಪಿಗಳನ್ನ ಬಂಧನ ಮಾಡಿಲ್ಲ. ಆದರೆ, ಡಾಕ್ಟರಗಳ ಮನೆ ಕಳ್ಳತನ ಆದರೆ, ಆರೋಪಿಗಳ ಹಿಡಿಯುತ್ತಾರೆ. ಹೀಗೆ ಮಾಡುವುದು ಎಷ್ಟು ಸರಿ ಎಂದು ಜಯತೀರ್ಥ ಕಟ್ಟಿ ಪ್ರಶ್ನಿಸಿದ್ದಾರೆ.
ಮಲ್ಲಿಕಾರ್ಜುನ ಸತ್ತಿಗೇರಿ ಜನರ ಪರವಾಗಿ ನೊಂದು ಹಾಗೇ ಮಾತಾಡಿದ್ದಾರೆ ಎಂದಿರುವ ಕಟ್ಟಿಯವರು, ನಾವೂ ಇನ್ಸಪೆಕ್ಟರ್ ಮಹಾಂತೇಶ ಹೊಳಿ ಸೇರಿದಂತೆ ಹಲವರ ಮೇಲೆ ದೂರು ನೀಡಿದ್ದು, ಅವರ ಮೇಲೆ ಎಫ್ಐಆರ್ ದಾಖಲು ಮಾಡಬೇಕೆಂದರು.
ಮೂರು ಬಾರಿ ಕಳ್ಳತನ ನಡೆದಿದೆ. ಆರೋಪಿಗಳನ್ನು ಹಿಡಿಯಿರಿ ಎಂದು ಹೇಳಿದಕ್ಕೆ ಇನ್ಸಪೆಕ್ಟರ್ ಮಹಾಂತೇಶ ಹೊಳಿ ಬೇರೆ ಥರದಲ್ಲಿ ‘ರಿಯಾಕ್ಟ್’ ಮಾಡಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ.
ನ್ಯಾಯವಾದಿ ಸಂಜೀವ ಬಡಸ್ಕರ್, ಉಮೇಶ ಧುಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.