ಮಹಾನಗರ ಪಾಲಿಕೆಯ ವಾಹನಗಳ ಬ್ಯಾಟರಿ ಕಳ್ಳತನ..!

ಹುಬ್ಬಳ್ಳಿ: ನಗರದ ನ್ಯೂ ಇಂಗ್ಲೀಷ್ ಶಾಲೆಯ ಹತ್ತಿರದಲ್ಲಿರುವ ಪಾಲಿಕೆಯ ವಲಯ ಕಚೇರಿಯಲ್ಲಿ ನಿಲ್ಲಿಸಿದ್ದ ಮಹಾನಗರದ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ 9 ವಾಹನಗಳ ಬ್ಯಾಟರಿಯನ್ನ ಕಳ್ಳರು ದೋಚಿರುವ ಪ್ರಕರಣ ಇಂದು ಬೆಳಿಗ್ಗೆ ವಾಹನವನ್ನ ಆರಂಭಿಸುವಾಗ ಗೊತ್ತಾಗಿದೆ.
ಇಂದು ಬೆಳಿಗ್ಗೆ ಎಂದಿನಂತೆ ಕರ್ತವ್ಯ ನಿರ್ವಹಣೆ ಮಾಡಲು ವಾಹನವನ್ನ ಆರಂಭಿಸಲು ಪ್ರಯತ್ನ ಪಟ್ಟಾಗ, ಬಹುತೇಕ ವಾಹನಗಳು ಆರಂಭವಾಗಿಲ್ಲ. ಇದರಿಂದ ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ ಬ್ಯಾಟರಿ ಕಳ್ಳತನವಾಗಿರುವುದು ಪತ್ತೆಯಾಗಿದೆ. ತಡರಾತ್ರಿ ವಾಹನಗಳನ್ನ ಎಂದಿನಂತೆ ಇದೇ ಜಾಗದಲ್ಲಿ ನಿಲ್ಲಿಸಿ ಹೋಗಲಾಗುತ್ತಿದ್ದು, ಯಾವತ್ತೂ ಹೀಗೆ ಆಗಿರಲಿಲ್ಲ. ಆದರೆ, ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ.
ಗಾಬರಿಯಾದ ವಾಹನ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಅಕ್ಕಪಕ್ಕದಲ್ಲಿರುವ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ಮಾಡುತ್ತಿದ್ದಾರೆ.
ಬ್ಯಾಟರಿಯ ಕಳ್ಳತನದಿಂದ ಇಂದು 9 ವಾಹನಗಳು ಕಸ ಸಂಗ್ರಹಿಸಲು ಹೋಗದ ಸ್ಥಿತಿ ನಿರ್ಮಾಣವಾಗಿದೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.