Exclusive ಅರ್ಬನ್ ರೂಟ್ಸ್: ಹುಕ್ಕಾ ಕೆಫೆ ಮೇಲೆ ಹುಬ್ಬಳ್ಳಿ ಪೊಲೀಸರ ದಾಳಿ

ಹುಬ್ಬಳ್ಳಿ: ಯುವಕರಿಗೆ ಮಾದಕ ದ್ರವ್ಯಗಳನ್ನು ಸೇವನೆ ಮಾಡಲು ಕೊಡುತ್ತಾರೆಂಬ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಪೊಲೀಸರು, ಅರ್ಬನ್ ರೂಟ್ಸ್ ಹೆಸರಿನ ಹುಕ್ಕಾ ಕೆಫೆ ಮೇಲೆ ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ಕಲೆ ಹಾಕಿದ ನಂತರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕರು, ವಿದ್ಯಾನಗರ ಠಾಣೆ ಪೊಲೀಸರು ಮತ್ತು ಆರ್ಥಿಕ ಅಪರಾಧ ಮತ್ತು ದ್ರವ್ಯ ಪತ್ತೆ ಪೊಲೀಸ್ ಠಾಣೆಯವರು ದಾಳಿ ಮಾಡಿದ್ದಾರೆ.
ವಿದ್ಯಾನಗರದ ಕಲಬುರ್ಗಿ ಗಾರ್ಡನ್ ಹತ್ತಿರ ಅರ್ಬನ್ ರೂಟ್ಸ್ ಹೆಸರಿನಲ್ಲಿ ಹುಕ್ಕಾ ಕೆಫೆ ನಡೆದಿತ್ತು.
ಈ ಸಂಬಂಧವಾಗಿ ಪೊಲೀಸರು ಸಿಕ್ಕಿರುವ ಮಾದಕ ದ್ರವ್ಯವನ್ನ ಬೆಂಗಳೂರಿನ ಎಫ್.ಎಸ್.ಎಲ್ ಕಚೇರಿಗೆ ಕಳಿಸಿದ್ದಾರಂತೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಪೊಲೀಸರ ಅರ್ಬನ್ ರೂಟ್ಸ್ ಯಾರು ನಡೆಸುತ್ತಿದ್ದರು. ಎಷ್ಟು ತಿಂಗಳಿಂದ ನಡೆಸುತ್ತಿದ್ದರು. ಈಗ ಯಾರನ್ನ ವಿಚಾರಣೆ ಮಾಡ್ತಿದ್ದಾರೆ ಮತ್ತೂ ಎಷ್ಟು ಜನರನ್ನ ಠಾಣೆಗೆ ಕರೆದುಕೊಂಡು ಬಂದಿದ್ದಾರೆಂಬ ಬಗ್ಗೆ ಮಾಹಿತಿ ನೀಡಿಲ್ಲ.
ನಗರದಲ್ಲಿ ಹುಕ್ಕಾ ಕೆಫೆಯಲ್ಲಿ ಎಂತಹ ಮಾದಕ ದ್ರವ್ಯ ಬಳಕೆಯಾಗುತ್ತಿತ್ತು ಎಂಬುದು ಬೆಂಗಳೂರಿನಿಂದ ವರದಿ ಬಂದ ನಂತರವೇ, ಪೊಲೀಸರು ಮಾಹಿತಿ ನೀಡಿದ್ರೇ ಗೊತ್ತಾಗತ್ತೆ.