Posts Slider

Karnataka Voice

Latest Kannada News

ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿ ರಸ್ತೆಗಿಳಿದ ಡಿಸಿಪಿ ಬಸರಗಿ…!

1 min read
Spread the love

ಹುಬ್ಬಳ್ಳಿ: ಅವಳಿನಗರದಲ್ಲಿ ರಸ್ತೆ ಸಂಚಾರ ನಿಯಮಗಳನ್ನ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ ಡಿಸಿಪಿ ಬಸರಗಿ ಅವರು ಇಂದು ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿಯ ರಸ್ತೆಗಿಳಿದಿದ್ದರು.

ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಹುಬ್ಬಳ್ಳಿ ಪೂರ್ವ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಆಯೋಜನೆಯೊಂಡ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಬೈಕ್ ಜಾಥಾ ನಡೆಸಿದರು. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದನ್ನ ಮಾಡಿದರು. ಕಡ್ಡಾಯವಾಗಿ ಹೆಲ್ಮೇಟ್ ಹಾಕಿಕೊಂಡು ಸಂಚಾರ ಮಾಡುವುದರಿಂದ ಜೀವ ಉಳಿಸಿಕೊಳ್ಳಬಹುದು. ಸ್ವಲ್ಪ ಯಾಮಾರಿದರೂ, ಜೀವಕ್ಕೆ ಕುತ್ತು ಬರುತ್ತದೆ ಎಂಬುದನ್ನ ತಿಳಿಸುವ ಪ್ರಯತ್ನವನ್ನ ಮಾಡುತ್ತಿದ್ದರು.

ಈ ಸಮಯದಲ್ಲಿ ಮಾತನಾಡಿದ ಡಿಸಿಪಿ ಆರ್.ಬಿ.ಬಸರಗಿ ಅವರು, ಜನತೆ ಸಂಚಾರ ನಿಯಮಗಳನ್ನ ಪಾಲನೆ ಮಾಡಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೋರಿದರು.

ಸಂಚಾರಿ ಠಾಣೆಯ ಇನ್ಸಪೆಕ್ಟರುಗಳಾದ ಶ್ರೀಕಾಂತ ತೋಟಗಿ, ಕಾಡದೇವರಮಠ ಹಾಗೂ ಮಹಾಂತೇಶ ಹೊಸಪೇಟೆ ಸೇರಿದಂತೆ ಸಿಬ್ಬಂದಿಗಳಾದ ಆರ್.ಬಿ. ಚಲವಾದಿ, ಎಂ.ಜಿ. ಬೆಂಗೇರಿ, ಜೆ.ಎಸ್. ಚೆನ್ನಪ್ಪಗೌಡ್ರ, ರಾಜು ಕೊರವರ, ಶಾಂತೇಶ ಶಿರಸಂಗಿ, ಶಂಭು ರೆಡ್ಡಿ, ಮಂಜುನಾಥ ಕುರಿಯವರ, ಎಸ್.ಎಚ್. ಕೊಣ್ಣೂರ, ಬಡಿಗೇರ, ಜಗದೀಶ ಮ್ಯಾಗಿನಮಣಿ, ಬಿ ಎಂ ಡಾಸ್ಕೊನ, ಸಿ ಕೆ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed