ಹುಬ್ಬಳ್ಳಿಯ “ಪಿಸಿ ಜಾಬಿನ್” ಕಾಲೇಜು ಪ್ರಾಧ್ಯಾಪಕ ಆತ್ಮಹತ್ಯೆ… Exclusive
1 min readಹುಬ್ಬಳ್ಳಿ: ಕಳೆದ ನಾಲ್ಕು ವರ್ಷಗಳಿಂದ ಪಿಸಿ ಜಾಬಿನ್ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದವರು ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿದ್ಯಾನಗರದಲ್ಲಿ ಸಂಭವಿಸಿದೆ.
ಪಿ.ಸಿ.ಜಾಬಿನ್ ಮಹಾವಿದ್ಯಾಲಯದಲ್ಲಿ ಕೆಮಿಸ್ಟ್ರಿ ವಿಷಯವನ್ನ ಭೋದಿಸುತ್ತಿದ್ದ ಪ್ರವೀಣಕುಮಾರ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ಪ್ರಾಧ್ಯಾಪಕರಾಗಿದ್ದಾರೆ.
ಪ್ರವೀಣಕುಮಾರ ಅವರ ಪತ್ನಿ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹತ್ತು ದಿನಗಳ ಹಿಂದಷ್ಟೇ ಈ ದಂಪತಿಗಳಿಗೆ ಗಂಡು ಮಗು ಜನಿಸಿದೆ.
ಪ್ರವೀಣಕುಮಾರ ನಿನ್ನೆ ಇಡೀ ದಿನ ಲವಲವಿಕೆಯಿಂದ ಐದು ತರಗತಿಯನ್ನ ತೆಗೆದುಕೊಂಡಿದ್ದರೆಂದು ಗೊತ್ತಾಗಿದೆ. ಪ್ರಕರಣದ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.